ಕಾರವಾರ: ನಗರದ ಅಲಿಗದ್ದಾ ಕಡಲತೀರದಲ್ಲಿ ಶನಿವಾರ ಬೃಹತ್ ಕಡಲಾಮೆಯ ಮೃತದೇಹವೊಂದು ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಸಮುದ್ರದ ಅಂಚಿನಲ್ಲಿ ಬೃಹತ್ ಕಡಲಾಮೆ ಇರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ಒದಗಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಕಡಲಾಮೆಯ ಮೃದೇಹವನ್ನು ನೀರಿನಿಂದ ಮೇಲೆ ಕಡಲತೀರಕ್ಕೆ ತಂದರು.
ಈ ಕಡಲಾಮೆಯನ್ನು ಗ್ರೀನ್ ಸೀ ಟರ್ಟಲ್ ಎಂದು ಕರೆಯಲಾಗುತ್ತಿದ್ದು ಇದು ವಯಸ್ಸಾಗಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟು ದಂಡೆಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಡಲಾಮೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದ್ದು ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.