ಭಾರತ್ ಜೋಡೋ ಯಾತ್ರೆಗೆ ತಮಿಳುನಾಡಿನಲ್ಲಿ ಭಾರೀ ಜನಬೆಂಬಲ

ತಮಿಳುನಾಡು: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಮ್ಮಿಕೊಳ್ಳಲಾಗಿರುವ ಭಾರತ ಜೋಡೋ ಯಾತ್ರೆಗೆ ತಮಿಳುನಾಡಿನಲ್ಲಿ ಭಾರೀ ಜನಬೆಂಬಲ ಸಿಕ್ಕಿದೆ. ಕನ್ಯಾಕುಮಾರಿಯ ಮುಳುಗುಮೂರು ಪ್ರದೇಶದಿಂದ 4 ನೇ ದಿನದ ಯಾತ್ರೆ ಇಂದು ಪುನರಾರಂಭವಾಗಿದೆ.

ರಾಹುಲ್ ಅವರೊಂದಿಗೆ ಸರ್ವೋದಯ ಪಕ್ಷದ ಯೋಗೇಂದ್ರ ಯಾದವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ತಮಿಳುನಾಡಿನ ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ದಾರಿಯುದ್ದಕ್ಕೂ ರಾಷ್ಟ್ರದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಲಾಗಿದೆ. ಭಾರೀ ಬಿಗಿ ಭದ್ರತೆ ನಡುವೆಯೂ ರಾಹುಲ್ ಜನಸಾಮಾನ್ಯರನ್ನು ಭೇಟಿ ಮಾಡಿದರು. ಕೆಲವು ಮಕ್ಕಳು ಅವರೊಂದಿಗೆ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಪೌರಕಾರ್ಮಿಕರು ಸೇರಿದಂತೆ ಹಲವರೊಂದಿಗೆ ರಾಹುಲ್ ಸೆಲ್ಫಿಗೆ ಪೋಸ್ ನೀಡಿದರು.

ನಿರುದ್ಯೋಗದ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ಶೇ. 42ರಷ್ಟು ನಿರುದ್ಯೋಗಿಗಳಿದ್ದಾರೆ. ಭಾರತದ ಭವಿಷ್ಯ ಅವರ ಕೈಯಲ್ಲಿತ್ತು. ನಾವು ಅಂಥವರಿಗಾಗಿ ನಡೆಯುತ್ತಿದ್ದೇವೆ. ಉದ್ಯೋಗಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.