ನವದೆಹಲಿ: ವಿವಿಧ ರಾಜ್ಯಗಳಿಗೆ ಬಿಜೆಪಿ ಪಕ್ಷದ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ಹೊಸ ತಂಡವನ್ನು ಪಕ್ಷ ನೇಮಿಸಿದೆ. ಮಾಜಿ ಸಿಎಂಗಳಾದ ವಿಜಯ್ ರೂಪಾನಿ ಮತ್ತು ಬಿಪ್ಲಬ್ ದೇಬ್ ಪಂಜಾಬ್, ಹರಿಯಾಣ ರಾಜ್ಯದ ಜವಾಬ್ದಾರಿ ನೀಡಲಾಗಿದೆ.
ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹರಿಯಾಣದ ಉಸ್ತುವಾರಿ, ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಪಂಜಾಬ್-ಚಂಡೀಗಢದ ಉಸ್ತುವಾರಿ, ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಪಶ್ಚಿಮ ಬಂಗಾಳದ ಉಸ್ತುವಾರಿ ಮತ್ತು ಸಂಬಿತ್ ಪಾತ್ರಾ ಈಶಾನ್ಯ ರಾಜ್ಯಗಳ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ.