ನಿರಂತರ ಮಳೆ ಹಿನ್ನಲೆ ನಾಳೆ ಅಂಗನವಾಡಿ, ಶಾಲೆ ಗಳಿಗೆ ರಜೆ ಘೋಷಣೆ

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಜೂ.16ರಿಂದ 17ರವರೆಗೆ ಬಾರಿ ಮಳೆಯಾಗುವ ಮುನ್ಸೂಚನೆ ಇದ್ದು ರೆಡ್ ಅಲರ್ಟ್ ಘೋಷಿಸಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜೂ.17ರಂದು ರಜೆ ಘೋಷಿಸಲಾಗಿದೆ.ಕಾರವಾರ, ಅಂಕೋಲಾ , ಕುಮಟಾ, ಹೊನ್ನಾವರಮತ್ತು ಭಟ್ಕಳ ತಾಲೂಕಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.