
ಭಟ್ಕಳ ಜೂ.16 : ತಾಲೂಕಿನಲ್ಲಿ ಸುರಿಯುತ್ತಿದ್ದ ಭಾರಿ ಮಳೆಯಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಗುಳ್ಮೆ ಬೆಳಲಖಂಡ ದಲ್ಲಿರುವ ಲಕ್ಕಿ ನೂಡಲ್ ಫ್ಯಾಕ್ಟರಿ ಹಿಂಬದಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 50 ವರ್ಷದ ಮಾದೇವ ನಾರಾಯಣ ದೇವಾಡಿಗ ಎನ್ನಲಾಗಿದೆ. ಈತ ಜೂನ್ 12 ಗುರುವಾರ 5 ಗಂಟೆ ಯಿಂದ ಜೂನ್ 14 ಶನಿವಾರ 7 ಗಂಟೆಯ ನಡುವಿನ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ವೇಳೆ ಭಟ್ಕಳದ ಗುಳ್ಮೆ ಬೆಳಲಖಂಡ ದಲ್ಲಿರುವ ಲಕ್ಕಿ ಫ್ಯಾಕ್ಟರಿ ನೂಡಲ್ ಫ್ಯಾಕ್ಟರಿ ಹಿಂಬದಿಯಿಂದ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಭಾರಿ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ವ್ಯಕ್ತಿಯ ಪತ್ನಿ ಲಕ್ಷ್ಮೀ ಮಾದೇವ ದೇವಾಡಿಗ ದೂರು ದಾಖಲಿಸಿದ್ದಾರೆ.



