‘ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ’

ನವದೆಹಲಿ/ಬೆಂಗಳೂರು: ಇರಾನ್-ಇಸ್ರೇಲ್ ಉದ್ವಿಗ್ನತೆದಿಂದಾಗಿ ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರಿಂದಾಗಿ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ಅಡುಗೆ ಎಣ್ಣೆ ಬೆಲೆ ಕಳೆದ ಶನಿವಾರದಿಂದ 3-4ರೂ. ಏರಿಕೆಯಾಗಿದೆ.

ಸದ್ಯ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವಸ್ತುಗಳು ಹಾಗೂ ಪದಾರ್ಥಗಳು ದುಬಾರಿಯಾಗುತ್ತಿವೆ. ಒಂದೆಡೆ ಕಚ್ಛಾ ತೈಲ ಬೆಲೆ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಅಡುಗೆ ಎಣ್ಣೆ ಬೆಲೆ ಶನಿವಾರದಿಂದಲೇ ಲೀಟರ್‌ಗೆ 3 ರಿಂದ 4 ರೂ. ಏರಿಕೆಯಾಗಿದೆ

ಖಾದ್ಯ ತೈಲಗಳಾದ ಸನ್ ಫ್ಲವರ್, ಫಾಮ್ ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ, ಸಾಸಿವೆ ಎಣ್ಣೆ ಹಾಗೂ ದೀಪದ ಎಣ್ಣೆಯಲ್ಲಿಯೂ ಏರಿಕೆಯಾಗಿದೆ. ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರೆದರೆ ಲೀಟರ್‌ಗೆ 10 ರಿಂದ 30 ರೂ.ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬೆಲೆ ಏರಿಕೆ:
ಬ್ರ್ಯಾಂಡ್‌                      ಎಷ್ಟಿತ್ತು?     ಎಷ್ಟಾಗಿದೆ?
*ಸನ್ ಫ್ಲವರ್ ಆಯಿಲ್     139ರೂ.      141ರೂ.
*ಗೋಲ್ಡ್ ವಿನ್ನರ್            142ರೂ.       145ರೂ.
*ರುಚಿಗೋಲ್ಡ್                 110ರೂ.        112ರೂ.
*ಜೆಮಿನಿ                        147ರೂ.         150ರೂ.
*ಫ್ರೀಡಂ                        137ರೂ.         141ರೂ.
*ದೀಪದ ಎಣ್ಣೆ                  111ರೂ.         114ರೂ.

ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧದಿಂದಾಗಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತಿದೆ