ಬೆಂಗಳೂರು: ಇಂದು ಈದ್ಗಾ ಮೈದಾನದ ಬಳಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಹಿನ್ನೆಲೆಯಲ್ಲಿ ಅದ್ಧೂರಿ ಮೆರವಣಿಗೆಗೆ ಉತ್ಸವ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಾದರಾಯನಪುರದಿಂದ ಮೆರವಣಿಗೆ ಆರಂಭಿಸಲು ಸಮಿತಿ ನಿರ್ಧಾರ ಕೈಗೊಂಡಿದ್ದು ಗೃಹ ಸಚಿವರ ಅನುಮತಿ ಸಿಕ್ಕಿದೆ ಅಂತ ಬೆಂಗಳೂರು ಗಣೇಶೋತ್ಸವ ಸಮಿತಿ ಹೇಳಿದೆ. ಸ್ಥಳೀಯ ಪೊಲೀಸರ ವಿರೋಧದ ನಡುವೆಯೂ ಮೆರವಣಿಗೆ ನಡೆಯಲ್ಲಿದ್ದು ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ.
ಪಾದರಾಯನಪುರದಿಂದ 40 ಕ್ಕೂ ಹೆಚ್ಚು ಹಲವು ಗಣೇಶ ಮೂರ್ತಿಗಳ ಮೆರವಣಿಗೆಗೆ ಪ್ಲ್ಯಾನ್ ಮಾಡಿದ್ದು ಚಾಮರಾಜಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಎಲ್ಲ ಗಣೇಶ ಮೂರ್ತಿಗಳು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ನಂತರ ಚಾಮರಾಜಪೇಟೆಯ ಗಣೇಶ ಮೂರ್ತಿಗಳು ಮೈಸೂರು ಸರ್ಕಲ್ ಬಳಿ ಸೇರಲಿದೆ
ಚಾಮರಾಜಪೇಟೆ ಮೈದಾನಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ವಹಿಸಲಾಗಿದೆ. 1500 ಪೊಲೀಸ್ ಸಿಬ್ಬಂದಿ, 10 ಕೆಎಸ್ ಆರ್ ಪಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. ಎಲ್ಲವೂ ಶಾಂತಿಯುತವಾಗಿ ನಡೆಯಲಿದೆ. ಸಮಿತಿ ಜೊತೆ ಈಗಾಗಲೇ ಚರ್ಚೆ ಮಾಡಲಾಗಿದೆ ಎಂದರು.