ಶಾರದಾ ಮಾದೇವ ಮೊಗೇರಗೆ ‘ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ’

ಹೊನ್ನಾವರ: ತಾಲೂಕಿನ ಮಂಕಿಯ ಬೆದ್ರಕೇರಿ ಗ್ರಾಮದ ಶಾರದಾ ಮಾದೇವ ಮೊಗೇರ ಅವರನ್ನು ‘ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ’ಗೆ ಜಿಲ್ಲೆಯಿಂದ ಸಂಪ್ರದಾಯ ಪದ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. 2022 ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ಜಾನಪದ ಕ್ಷೇತ್ರ ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಲಾವಿದರಿಗೆ 25,000 ರೂ. ಮೊತ್ತದ ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.