ಕಾರ್ಬನ್ ಫೈಬರ್ ದೋಟಿ ಉಪಯೋಗದ ಕುರಿತು ಉಚಿತ ಮಾಹಿತಿ ಕಾರ್ಯಾಗಾರ

ಹೊನ್ನಾವರ: ತಾಲೂಕಿನ ಹಿರೇಬೈಲ್ ಈಶ ಸಭಾಭವನದಲ್ಲಿ ‘ಈಸೀ ಲೈಫ್ ಎಂಟರ್‌ಪ್ರೈಸಸ್’ ವತಿಯಿಂದ ಕಾರ್ಬನ್ ಫೈಬರ್ ದೋಟಿ ಉಪಯೋಗದ ಕುರಿತು ಬುಧವಾರ ಉಚಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ನಡೆಯಿತು. ಪ್ರತಿಭಾ ವಾದ್ಯವೃಂದದ ಮಾರುತಿ ನಾಯ್ಕ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು. ಗ್ರಾಮದ ಹಾಗೂ ಸುತ್ತ ಮುತ್ತಲ ಊರಿನ ಆಸಕ್ತ ಕೃಷಿಕರೆಲ್ಲ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.