ಹೊನ್ನಾವರದಲ್ಲಿ ತಾಲೂಕಾ ಮಟ್ಟದ ‘ಗ್ರಾಮೀಣ ಕ್ರೀಡೋತ್ಸವ’

ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಡಳಿತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕ ಪಂಚಾಯತಿ ಹಾಗೂ ತಾಲೂಕ ಯುವ ಒಕ್ಕೂಟದ ಆಶ್ರಯದಲ್ಲಿ ‘ತಾಲೂಕ ಮಟ್ಟದ ಗ್ರಾಮೀಣ ಕ್ರೀಡೋತ್ಸವ’ ಭಾನುವಾರ ನಡೆಯಿತು.

ಕ್ರೀಡೋತ್ಸವಕ್ಕೆ ತಹಶೀಲ್ದಾರ ನಾಗರಾಜ ನಾಯ್ಕಡ್ ಚಾಲನೆ ನೀಡಿ, ಕಬ್ಬಡ್ಡಿ ಗ್ರಾಮೀಣ ಕ್ರೀಡೆಯಾದರೂ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಇದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಕ್ರೀಡಾಪಟುಗಳನ್ನು ಸದೃಡಗೊಳಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಸುರೇಶ ನಾಯ್ಕ ಮಾತೃಭೂಮಿಗೆ ಕಬ್ಬಡ್ಡಿ ಆಟಗಾರರು ನೀಡುವಷ್ಟು ಗೌರವ ಮತ್ತೆ ಯಾವ ಕ್ರೀಡೆಯಲ್ಲಿಯೂ ಇಲ್ಲ. ಶಿಸ್ತು ಹಾಗೂ ಸಂಯಮದಿಂದ ಕ್ರೀಡಾ ನಿಯಮದಿಂದ ಆಡುವಂತೆ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರೌಡಶಾಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಅಶೊಸಿಯೇಶನ್ ಸೀತಾರಾಮ ನಾಯ್ಕ, ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ,ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ವಿ.ಎ.ಪಟಗಾರ, ರಾಧಾಕೃಷ್ಣ ನಾಯ್ಕ , ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಕಬ್ಬಡ್ಡಿ ಪಂದ್ಯಾವಳಿ ಜರುಗಿತು.