ಆಗಸ್ಟ್ 8 ಸೋಮವಾರದಂದು ಹೊನ್ನಾವರದ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ.!

ಹೊನ್ನಾವರ: ಆಗಸ್ಟ್ 8 ರಂದು ಸೋಮವಾರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕಾಸರಕೋಡ ಶಾಖೆಯ ಕೆಳಗಿನೂರು, ಬಳ್ಕೂರು, ಟೊಂಕಾ, ಇಡಗುಂಜಿ, ಮಂಕಿ ಎಕ್ಸ್‌ಪ್ರೆಸ್‌ & ದೇವರಗದ್ದೆ ಹಾಗೂ ಗೇರುಸೊಪ್ಪ ಶಾಖೆಯ ಮಾಗೋಡ, ಉಪ್ಪೋಣಿ ಭಾಗಗಳಲ್ಲಿ ನಿರ್ವಹಣೆಯ ಕಾರಣದಿಂದ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಮನವಿ ಮಾಡಿದೆ.