ಹೊನ್ನಾವರ: ತಾಲೂಕಿನ ಅರೇಅಂಗಡಿ ಸಮೀಪ ಬೃಹತ್ ಆಲದ ಮರವೊಂದು ರಸ್ತೆಯಲ್ಲಿ ಬಿದ್ದ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಬಂದ್ ಆದ ಘಟನೆ ಗುರುವಾರ ನಡೆದಿದೆ.
ಹೊನ್ನಾವರದಿಂದ ಅರೇಅಂಗಡಿ ಮಾರ್ಗವಾಗಿ ಸಾಲ್ಕೋಡ್, ಕೆರೆಕೋಣ, ದರ್ಬೆಜಡ್ಡಿ, ಕಾನಕ್ಕಿ, ತೊಳಸಾಣಿ, ಚಿಕ್ಕೋಳಿ ಕಡೆ ತೆರಳುವ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಾಲ್ಕೋಡ್ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಸಹಕಾರದಿಂದ ಮರವನ್ನು ಕಟಾವು ಮಾಡುವ ಮೂಲಕ ಸಂಚಾರ ಸುಗಮಗೊಳಿಸಿದರು.
ವಿದ್ಯುತ್ ಲೈನ್ ಮರ ಬಿದ್ದ ಪರಿಣಾಮ ಲೈನ್ ತುಂಡಾಗಿದ್ದು, ಹೆಸ್ಕಾಂ ಸಿಬ್ಬಂದಿಗಳು ಮಳೆಯ ನಡುವೆಯೇ ಕರ್ತವ್ಯ ನಿರ್ವಹಿಸಿದ್ದಾರೆ. ಆ ಮೂಲಕ ಕೆಲವೇ ಗಂಟೆಯಲ್ಲಿ ವಿದ್ಯುತ್ ಸರಿಪಡಿಸಿ ಸ್ಥಳಿಯರ ಮೆಚ್ಚುಗೆಗೆ ಪಾತ್ರರಾದರು. ಬೃಹತ್ ಮರ ರಸ್ತೆಯಲ್ಲಿ ಬಿದ್ದರೂ ಹೆಚ್ಚಿನ ಹಾನಿ ಸಂಭವಿಸಿಲ್ಲ.