ಗೋಕರ್ಣ: ಶನಿವಾರ ಮುಂಜಾನೆಯಿಂದಲೇ ವರುಣನ ಆರ್ಭಟ ಜೋರಾಗಿದ್ದು ಬಹುತೇಕ ರಸ್ತೆಗಳು ಜಲಾವೃತ ಗೊಂಡಿದೆ. ರಥಬೀದಿ, ಗಂಜಿಗದ್ದೆ ಭಾಗದ ಮುಖ್ಯ ರಸ್ತೆಯಲ್ಲಿ ನೀರು ತುಂಬಿದ್ದು ಸಂಚಾರಕ್ಕೆ ತೊಡಕುಂಟಾಗಿದೆ.
ಇನ್ನು ನದಿಪಾತ್ರದ ಪ್ರದೇಶವಾದ ಗಂಗಾವಳಿ, ತದಡಿ ಭಾಗದಲ್ಲಿ ನದಿಯ ಹರಿವು ಹೆಚ್ಚಾಗಿದ್ದು ಯಾವುದೇ ಅಪಾಯ ಎದುರಾಗಿಲ್ಲ. ರಾಜ್ಯ ಹೆದ್ದಾರಿ ಶಿರಸಿ-ಗೋಕರ್ಣ ಮಾರ್ಗದ ಹಿತ್ತಲಮಕ್ಕಿ, ಮೂಲೇಕೆರಿ ಬಳಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.