ಕೊರೋನಾ ಕಡಿಮೆಯಾಗಿದೆ ಅಂತಾ ನಿರ್ಲಕ್ಷಿಸಬೇಡಿ.!

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಕೆಲದಿನಗಳ ಕಾಲ ಕೊವಿಡ್ ಗಂಭೀರತೆ ಇರುವುದಾಗಿ ಹೇಳಿದೆ. ಹೀಗಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಅವರು ಶನಿವಾರ ಬೆಂಗಳೂರಿನಲ್ಲಿ ನಡೆದ ಲಸಿಕಾಕರಣದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬೂಸ್ಟರ್ ಡೋಸ್ ಉಚಿತವಾಗಿ ಕೊಡಲಾಗುತ್ತಿದೆ. ಯಾರೂ ಕೂಡಾ ಕೊರೊನಾ ಕಡಿಮೆ ಆಗಿದೆ ಅಂತಾ ನಿರ್ಲಕ್ಷ್ಯ ಮಾಡಬೇಡಿ. 75 ದಿನಗಳ ಒಳಗೆ ಎಲ್ಲರಿಗೂ ಬೂಸ್ಟರ್ ಡೋಸ್ ಕೊಡುವ ಗುರಿ ಇಟ್ಟುಕೊಂಡಿದ್ದೇವೆ. ಜೊತೆಗೆ ವ್ಯಾಕ್ಸಿನ್ ನೀಡಲು ಸಕಲ ಸಿದ್ದತೆ ಮಾಡಿಕೊಂಡಿದ್ದೆವೆ ಎಂದು ಸುಧಾಕರ್ ತಿಳಿಸಿದರು.

Leave a Reply

Your email address will not be published. Required fields are marked *