ಗೋಕರ್ಣದ ಕೋಟಿತೀರ್ಥದಲ್ಲಿ ತ್ಯಾಜ್ಯ.!

ಗೋಕರ್ಣ: ಅದೆಷ್ಟೋ ವರ್ಷಗಳ ನಂತರ ಜೀರ್ಣೋದ್ಧಾರಗೊಂಡಿದ್ದ ಕೋಟಿತೀರ್ಥದಲ್ಲಿ ಈಗಾಗಲೇ ಕೆಲವು ಕಡೆ ಪಾಚಿ ಕಂಡುಬಂದಿದೆ. ಇನ್ನೊಂದೆಡೆ ಕೆಲವರು ಅಪರ ಕಾರ್ಯ ನೆರವೇರಿಸಿ ನಿಗದಿಪಡಿಸಿದ ಸ್ಥಳದಲ್ಲಿ ಪಿಂಡ ವಿರ್ಸಜನೆ ಮಾಡದೇ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಇದರಿಂದ ನೀರಿನಲ್ಲಿ ಅನ್ನ, ಮತ್ತು ಇತರೆ ಪದಾರ್ಥಗಳು ತೇಲುತ್ತಿದ್ದು ಕೆರೆ ಮತ್ತೆ ಮಲಿನಗೊಳ್ಳುತ್ತಿದೆ.

ಇಲ್ಲಿನ ಪಟ್ಟೆ ವಿನಾಯಕ ಗೆಳೆಯರ ಬಳಗವು ಪಿಂಡ ವಿರ್ಸಜನೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಅಲ್ಲದೆ ಪ್ರತಿ ಮನೆಗೆ ಕರಪತ್ರ ವಿತರಿಸಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ. ಆದರೂ ಜನ ತಮ್ಮ ಚಾಳಿ ಬಿಡದಿರುವುದು ದುರದೃಷ್ಟಕರವಾಗಿದೆ.

ಕೆರೆಗಿನ್ನೂ ಮೀನು ಬಿಟ್ಟಿಲ್ಲ.!

ಬೇಸಿಗೆಯಲ್ಲಿ ನೀರು ಖಾಲಿ ಮಾಡಿ ಸ್ವಚ್ಚಗೊಳಿಸಿದ ನಂತರ ಮಳೆ ಬಂದು ಮತ್ತೆ ನೀರು ತುಂಬಿದ್ದು, ಕೆರೆಯಲ್ಲಿನ ತ್ಯಾಜ್ಯವನ್ನು ತಿಂದು ಸ್ವಚ್ಚಗೊಳಿಸಲು ಮೀನುಗಳನ್ನ ಬಿಡಬೇಕಿತ್ತು. ಆದರೆ ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳುಗಳೇ ಕಳೆದರು ಮೀನು ಬಿಡದಿರವ ಬಗ್ಗೆ ಟೀಕೆ ವ್ಯಕ್ತವಾಗಿದೆ. ಕೆರೆಗೆ ಮೀನು ಬಿಟ್ಟದ್ದರೆ ತ್ಯಾಜ್ಯವನ್ನು ಸ್ವಚ್ಚಗೊಳಿಸುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.