ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ.!

ಹಳಿಯಾಳ: ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಳಿಯಾಳ ಮೂಲದ ಪ್ರೇಮಿಗಳು ಜುಲೈ 15 ರಂದು ಮುಂಡಗೋಡ ರಸ್ತೆಯಲ್ಲಿ ವಿಷ ಸೇವಿಸಿದ್ದರು. ನಂತರ ಅವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದ್ದಾರೆ.

ಜ್ಯೋತಿ ಸುರೇಶ ಅಂತ್ರೋಳಕರ (19), ರಿಕೇಶ ಸುರೇಶ ಮಿರಾಶಿ (20) ಮೃತ ದುರ್ದೈವಿಗಳು. ಹಳಿಯಾಳದ ಹವಗಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಿಂಗಳ ಹಿಂದೆಯಷ್ಟೇ ಬೇರೆ ಯುವಕನೊಂದಿಗೆ ಜ್ಯೋತಿ ಮದುವೆಯಾಗಿದ್ದಳು. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.