ಭಟ್ಕಳ: ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆ ಮುರ್ಡೇಶ್ವರದ ಶಿಲ್ಪಿ ಕೇಶವ ನಾಯ್ಕ ಅವರಿಗೆ ‘ಶಿಲ್ಪಕಲಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚಿಗೆ ಬೆಂಗಳೂರಿನ ಕಂಠೀರವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಈ ಪ್ರಶಸ್ತಿ ಪ್ರದಾನ ಮಾಡಿದರು.
ಮೂಲತಃ ಮುರುಡೇಶ್ವರದ ಚಂದ್ರಹಿತ್ಲ ನಿವಾಸಿಯಾದ ಕೇಶವ ನಾಯ್ಕ, ಶಿಲ್ಪಕಲೆಯಲ್ಲಿ ತರಬೇತಿ ಪಡೆದು ಕಳೆದ 15 ವರ್ಷಗಳಿಂದ ಶಿಲ್ಪಕಲಾ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಮುರುಡೇಶ್ವರ ಕೊಡ್ಸಳು ಹಾಗೂ ಕಾರ್ಕಳದಲ್ಲಿ ಇವರ ಕೆತ್ತನೆ ಕಾರ್ಖಾನೆ ಇದೆ. ಹೊಯ್ಸಳ ಶೈಲಿಯ ಕೆತ್ತನೆಯಲ್ಲಿ ನಿಪುಣತೆ ಪಡೆದಿರುವ ಇವರು ಹತ್ತಾರು ದೇವಸ್ಥಾನಗಳ ನೂತನ ದೇವಾಲಯ ಗರ್ಭಗುಡಿ ಕೆತ್ತನೆ ಮಾಡಿ ಜನಪ್ರಿಯರಾಗಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕçತಿಕ ಪ್ರತಿಷ್ಠಾನ ಪ್ರಶಸ್ತಿ ನೀಡಿ ಗೌರವಿಸಿದೆ.