ಮಣ್ಣುಳಿಯಲ್ಲಿ ಗಟಾರ ನೀರಿನಿಂದ ಬಾವಿ ಕಲುಷಿತ: ಕ್ರಮಕ್ಕೆ ಆಗ್ರಹಿಸಿ ನಗರಸಭೆಗೆ ಮನವಿ

ಭಟ್ಕಳ:

ನಗರಸಭೆ ವ್ಯಾಪ್ತಿಯ ವಾರ್ಡ ನಂಬರ 15 ರ ಮಣ್ಣುಳಿ ಭಾಗದಲ್ಲಿ ಗಟಾರಿನಲ್ಲಿ ಓಳಚರಂಡಿ ನೀರು ಹರಿದು ಬಾವಿ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಮಣ್ಣುಳಿ ವಾರ್ಡ್ ನ ಸಾರ್ವಜನಿಕರು ನಗರ ಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಮಣ್ಣುಳಿಯ ಪುಷ್ಪಾಂಜಲಿ ಹೋಗುವ ರಸ್ತೆಯ ಗಟಾರಿನಲ್ಲಿ ಕಳೆದ ಒಂದು ತಿಂಗಳಿನಿಂದ ಒಳಚರಂಡಿ ನೀರು ಸೋರಿಕೆಯಾಗಿ ಹರಿಯುತ್ತಿದೆ. ಇದರಿಂದಾಗಿ ಗಬ್ಬು ನಾರುತಿದ್ದು, ಈ ರಸ್ತೆಯಲ್ಲಿ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ಸ್ಥಳೀಯ ಸಾರ್ವಜನಿಕರು ಮೂಗು ಹಿಡಿದುಕೊಂಡು ಹೋಗುವ ಸ್ಥಿತಿ ಇದೆ. ಅಲ್ಲದೆ ಗಟಾರಿನಲ್ಲಿ ಹರಿಯುತ್ತೀರುವ ಈ ಮಲೀನ ನೀರು ಸ್ಥಳೀಯ ಬಾವಿಗಳಿಗೆ ಸೋರಿಕೆಯಾಗಿ ಬಾವಿ ನೀರು ಕಲುಷಿತಗೊಂಡಿದೆ. ಮಳೆಗಾಲದಲ್ಲಿ ಬಾವಿ ನೀರು ತುಂಬಿರುವ ಈ ಸಮಯದಲ್ಲಿ ಕಲುಷಿತ ನೀರು ಸೇರ್ಪಡೆಯಾದ ಕಾರಣ ನೀರು ಖಾಲಿ ಮಾಡದ ಸ್ಥಿತಿಯಲ್ಲಿ ಗ್ರಾಮಸ್ಥರಿದ್ದಾರೆ. ಅಲ್ಲದೇ ಈ ನೀರು ಕುಡಿದು ಅಸ್ವಸ್ಥರಾಗುವ ಭೀತಿ ಸ್ಥಳೀಯರಿಗಿದ್ದು, ನಗರಸಭೆಯ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ತಾವುಗಳು ಈ ಕೂಡಲೇ ಪರಿಶೀಲನೆ ನಡೆಸಿ ತ್ಯಾಜ್ಯ ನೀರು ಗಟಾರಿನಲ್ಲಿ ನಿಲ್ಲದಂತೆ ಛೇಂಬರ ಸೋರಿಕೆ ಸರಿಪಡಿಸಬೇಕು ಮತ್ತು ಮಲೀನವಾದ ಬಾವಿಗಳನ್ನು ಸ್ವಚ್ಚಗೊಳಿಸಿ ನೀಡಬೇಕು. ಒಂದೊಮ್ಮೆ ನೀವು ಇದನ್ನು ಇನ್ನೇರಡೂ ದಿನಗಳಲ್ಲಿ ಸರಿಪಡಿಸಿಕೋಡದಿದ್ದಲ್ಲಿ ಜೂ.15 ಸೋಮವಾರ ಬೆಳಿಗ್ಗೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಮತ್ತು ಆ ಸಂದರ್ಭದಲ್ಲಿ ಎನೇ ಅನಾಹುತಗಳು ನಡೆದರೂ ಅದಕ್ಕೆ ನಗರಸಭೆಯೆ ಹೊಣೆಗಾರರಾಗುತ್ತಾರೆ ಎಚ್ಚರವಿರಲಿ ಎಂದೂ ಮನವಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಪರಮೇಶ್ವರ ನಾಯ್ಕ, ಸುರೇಶ ನಾಯ್ಕ, ದಿನೇಶ ನಾಯ್ಕ, ನಾಗರಾಜ ನಾಯಕ, ಅನಂತ ದೇವಾಡಿಗ, ಶೇಕರ ನಾಯ್ಕ, ರಮೇಶ ನಾಯ್ಕ, ಈಶ್ವರ ನಾಯ್ಕ, ಕಿಶೋರ ನಾಯ್ಕ, ಮನೋಜ ನಾಯ್ಕ, ಮಾದೇವ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು