ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಎನ್ ಜಿ ಭಟ್ಟರಿಗೆ ‘ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಪ್ರಶಸ್ತಿ’ ಪ್ರಧಾನ

ಹೊನ್ನಾವರ: ನಿವೃತ್ತ ಪೋಸ್ಟ್ ಮಾಸ್ಟರ್, ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಎನ್ ಜಿ ಭಟ್ಟರಿಗೆ ‘ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಪ್ರಶಸ್ತಿ’ಯನ್ನು ಗದಗದಲ್ಲಿ ಜರುಗಿದ ಜಿಲ್ಲಾ ಕ್ಯಾಬಿನೆಟ್ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ ಗವರ್ನರ್ ಡಾ.ಗಿರೀಶ್ ಕುಚಿನಾಡ್ ಪ್ರಧಾನ ಮಾಡಿದರು. ಎನ್ ಜಿ ಭಟ್ಟರು ಕಳೆದ ಹಲವು ವರ್ಷಗಳಿಂದ ಲಯನ್ಸ್ ಕ್ಲಬ್‌ನ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆ ಮತ್ತು ಕೊರೋನಾ ಸಂದರ್ಭದಲ್ಲಿ ಮಾಡಿದ ಉತ್ತಮ ಕಾರ್ಯವನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.