ಅಕ್ರಮವಾಗಿ ಬೆಲೆಬಾಳುವ ಮರದ ತುಂಡು ಸಂಗ್ರಹ.! ಅರಣ್ಯಾಧಿಕಾರಿಗಳಿಂದ ದಾಳಿ

ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಅರಣ್ಯ ವಲಯಕ್ಕೆ ಒಳಪಡುವ ತುಂಬೊಳ್ಳಿಯ ಗ್ರಾಮ ಪಂಚಾಯತ ಸದಸ್ಯರೊರ್ವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾಗವಾನಿ, ನಂದಿ ಕಟ್ಟಿಗೆಗಳನ್ನು ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಅರಣ್ಯಗಳ್ಳರು ಮರಗಳನ್ನು ಕತ್ತರಿಸಿಕೊಂಡು ಸಾಗಾಟ ಮಾಡಲು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಹೆರಂಗಡಿ ಗ್ರಾ,ಪಂ ಸದಸ್ಯ ಸುರೇಶ್ ಗಣಪತಿ ನಾಯ್ಕ ಎನ್ನುವವರ ಮನೆಯಲ್ಲಿ ಅಕ್ರಮವಾಗಿ ಸಾಗವಾನಿ, ನಂದಿ ಕಟ್ಟಿಗೆ ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ. ಇವರ ಮನೆಯ ಆವಾರದಲ್ಲಿ ಅಕ್ರಮವಾಗಿ ಬೆಲೆಬಾಳುವ ಮರದ ತುಂಡು ಸಂಗ್ರಹಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ.