ಪಾಟ್ನಾ: ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಬಿಜೆಡಿ ಮುರಿದುಕೊಂಡಿದೆ. ಸಿಎಂ ನಿತೀಶ್ ಕುಮಾರ್ ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದ ಮುಖಂಡರೊಂದಿಗಿನ ಸಭೆಯ ನಂತರ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಇಷ್ಟು ದಿನ ಮೈತ್ರಿಯಲ್ಲಿ ಬಿರುಕುಂಟಾದ ಬಗ್ಗೆ ಊಹಾಪೋಹಗಳು ಕೇಳಿಬಂದಿತ್ತು. ಅಲ್ಲದೇ ನೀತಿ ಆಯೋಗದ ಸಭೆಗೆ ನಿತೀಶ್ ಗೈರಾಗಿದ್ದರು. ಹೀಗಾಗಿ ಬಿಜೆಪಿಯೊಂದಿಗಿನ ಸಂಬಂಧ ಹಳಸಿರುವುದು ಸ್ಪಷ್ಟವಾಗಿತ್ತು. ರಾಜ್ಯದಲ್ಲಿ ಹಲವು ದಿನಗಳ ತೀವ್ರ ರಾಜಕೀಯ ಊಹಾಪೋಹಗಳ ನಂತರ ಪಕ್ಷದ ಮುಖಂಡರೊಂದಿಗಿನ ಸಭೆಯಲ್ಲಿ ಇಂದು ನಿತೀಶ್ ಘೋಷಿಸಿದ್ದಾರೆ ಎನ್ನಲಾಗಿದೆ.