ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ 28 ಕುಟುಂಬದವರಿಗೆ ಶಾಸಕ ಸುನೀಲ ನಾಯ್ಕ ಪರಿಹಾರದ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು.
ನೆರೆ ಹಾವಳಿಯಿಂದಾಗಿ ಭಟ್ಕಳ ತಾಲೂಕಿನಲ್ಲಿ ರಸ್ತೆ, ಸೇತುವೆ ಮನೆಗಳಿಗೆ ಅಪಾರ ಹಾನಿಯಾಗಿದ್ದು, ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ಖುದ್ದು ಮನೆಗಳಿಗೆ ಅಧಿಕಾರಿಗಳೊಂದಿಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ನೆರೆಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡ 28 ಕುಟುಂಬದವರಿಗೆ ಪರಿಹಾರವನ್ನು ಒದಗಿಸಲಾಗಿದೆ. ವಾಸ್ತವ್ಯ ಸಾಧ್ಯವಿಲ್ಲದ ಮನೆಗಳಿಗೆ ಮತ್ತು ಮನೆಗಳ ದುರಸ್ತಿಗೆ ಕ್ರಮವಾಗಿ 5 ಲಕ್ಷ ಮತ್ತು 3 ಲಕ್ಷ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಮೊದಲ ಹಂತದ 95,000 ರೂಪಾಯಿ ಕಂತನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗಿದೆ.
ಭಾಗಶಃ ಮತ್ತು ಸಂಪೂರ್ಣ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಅಥವಾ ಇರುವ ಮನೆಯ ದುರಸ್ಥಿ ಆಯ್ಕೆಯನ್ನು ಸಂತ್ರಸ್ತರಿಗೆ ಬಿಟ್ಟಿದ್ದು. ಸರ್ಕಾರ ತಕ್ಷಣ ಸ್ಪಂದಿಸಿ ಅನುದಾನವನ್ನು ಬಿಡುಗಡೆ ಮಾಡಿದೆ. ಮತ್ತು ಇನ್ನೂ ಹಲವಾರು ಮನೆಗಳಿಗೆ ಅನುದಾನ ಬಿಡುಗಡೆ ಆಗಲಿದೆ ಇಂದು ಈ ವೇಳೆ ಶಾಸಕರು ಭರವಸೆ ನೀಡಿದ್ದಾರೆ