ಭಟ್ಕಳ: ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತದಿಂದ ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ರು. ಮೃತದೇಹಗಳನ್ನು ಹೊರತೆಗೆದು ಇದೀಗ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ. ಲಕ್ಷ್ಮಿ ನಾರಾಯಣ ನಾಯ್ಕ (60), ಲಕ್ಷ್ಮಿ ನಾಯ್ಕ(45), ಅನಂತನಾರಾಯಣ ನಾಯ್ಕ (38) ಹಾಗೂ ಲಕ್ಷ್ಮಿ ನಾರಾಯಣ ನಾಯ್ಕರವರ ಸೋದರಿ ಪುತ್ರ ಪ್ರವೀಣ್ ನಾಯ್ಕ (16) ಮೃತಪಟ್ಟವರು. ಕುಟುಂಬಸ್ಥರ ಸಮ್ಮುಖದಲ್ಲಿ ಈ ನಾಲ್ವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.