ಇಂದು ನಾಳೆ ಭಟ್ಕಳದಲ್ಲೇ ಮೊಕ್ಕಾಂ ಹೂಡುತ್ತೇನೆ – ಕೋಟಾ ಶ್ರೀನಿವಾಸ ಪೂಜಾರಿ

ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಸ ಪೂಜಾರಿ ಭಟ್ಕಳದಲ್ಲಿ ನಡೆದ ದುರಂತ ಘಟನೆಯ ಕುರಿತು ಮಾತನಾಡಿ ‘ಒಂದು ದಿನದ ಮಳೆಯು ಅದರಲ್ಲು ಭಟ್ಕಳ ಸೂಸಗಡಿ – 550, ಮುಂಡಳ್ಳಿ- 549.50, ಮುಟ್ಟಳ್ಳಿ- 546 ಹಾಗೂ ಮಾವಿನಕುರ್ವೆ 540.5 ಮೀ.ಮೀ. ಮಳೆ ಆಗಿರುವ ಮಳೆ ವರದಿ ಲಭ್ಯವಾಗಿದೆ. ಇದರ ಬಹುತೇಕ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಹ ಉಂಟಾಗಿದೆ. ಅದರಲ್ಲೂ ಗುಡ್ಡ ಕುಸಿತದಿಂದ ಒಂದೇ ಮನೆಯ ನಾಲ್ವರು ದಾರುಣವಾಗಿ ಸಾವಿಗೀಡಾಗಿದ್ದು ಬೇಸರವಾಗಿದೆ. ಘಟನೆ ತಿಳಿದು ಬೆಂಗಳೂರಿನಿಂದ ಭಟ್ಕಳಕ್ಕೆ ಆಗಮಿಸಿದ್ದು, ಅವಘಡ ಕುರಿತು ಮುಖ್ಯಮಂತ್ರಿಗಳಿಗೂ ಸಹ ವಿಷಯ ತಿಳಿಸಲಾಗಿದೆ ಎಂದರು

ಇನ್ನು ಸದ್ಯಕ್ಕೆ ಭಟ್ಕಳದಲ್ಲಿಯೇ ಶಾಸಕರು, ಅಧಿಕಾರಿಗಳೊಂದಿಗೆ ಮೊಕ್ಕಾಂ ಹೂಡಲಿದ್ದು, ಪರಿಹಾರದ ವಿಚಾರದಲ್ಲಿ ಚರ್ಚೆ ನಡೆಸಲಿದ್ದೇವೆ. ಸದ್ಯಕ್ಕೆ ಮ್ರತ ಲಕ್ಷ್ಮಿಯ ಸಹೋದರಿನ ಮಗನು ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ಹಾಗೂ ಇನ್ನುಳಿದ ಮೂವರ ಕುಟುಂಬದ ಸಂಬಂಧಿಕರನ್ನು ಗುರುತಿಸಿ ಪರಿಶೀಲಿಸಿ ಪರಿಹಾರ ನೀಡುವ ಕೆಲಸ ಸರಕಾರ ಮಾಡಲಿದೆ ಎಂದು ತಿಳಿಸಿದರು.

ಇನ್ನು ಮನೆಗಳ ಹಾನಿಯ ಪರಿಹಾರದ ಜೊತೆಗೆ ಕೆಲವೊಂದು ಕಡೆ ಅಂಗಡಿಗಳಿಗೂ ನೀರು ನುಗ್ಗಿದ್ದು ನಿಯಮದಲ್ಲಿ ಅವಕಾಶ ಇಲ್ಲದಿದ್ದರು ಸಹ ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಪರಿಹಾರ ತಲುಪಿಸಲಿದ್ದೇವೆ. ಅದರಂತೆ ಸಮುದ್ರ ತೀರದಲ್ಲಿ ದೋಣಿಗಳು ನೀರಿನಲ್ಲಿ ತೇಲಿ ಹೋಗಿದ್ದು ಕ್ರಷಿಕರ ಗದ್ದೆ ಜಮೀನಿಗು ಸಹ ನೀರು ನುಗ್ಗಿದ್ದು ಇವೆಲ್ಲವನ್ನು ಪರಿಶೀಲಿಸಿ ಪರಿಹಾರದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಪರಿಹಾರದ ಸರ್ವೇ ಕಾರ್ಯವೂ ಸಹ ಕಂದಾಯ ಇಲಾಖೆಯಿಂದ ನಡೆಯಲಿದ್ದು ಗರಿಷ್ಠ ಪರಿಹಾರದ ಭರವಸೆ ಸರಕಾರದಿಂದ ನೀಡಲಿದ್ದೇವೆ ಎಂದು ಹೇಳಿದರು.