ಭಟ್ಕಳ: ಮುಟ್ಟಳ್ಳಿಗೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ್ ಮಾಧ್ಯಮಗಳೊಂದಿಗೆ ಮಾತನಾಡಿ ’25 ವರ್ಷಗಳ ಇತ್ತೀಚಿನ ದಿನದಲ್ಲಿ ಈ ರೀತಿಯ ಭಾರಿ ಪ್ರವಾಹ ಪರಿಸ್ಥಿತಿಯ ಮಳೆಯು ಬಂದಿಲ್ಲವಾಗಿದ್ದು, 12 ತಾಸಿಗೂ ಅಧಿಕ ಸಮಯ ಸುರಿದ ಮಳೆಗೆ ಭಟ್ಕಳದ ಸಾಕಷ್ಟು ಕಡೆಗೆ ಹಾನಿ ಸಂಭವಿಸಿದೆ ಎಂದರು
ಇನ್ನು ಮನೆಗಳಿಗೆ ನೀರು ನುಗ್ಗಿದ್ದು ಹೊರತುಪಡಿಸಿ ಕಳೆದ ಕೆಲ ದಿನದ ಹಿಂದೆ ಸುರಿದ ಮಳೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಆದರೆ ಒಂದು ದಿನದ ಮಳೆಗೆ ಭಟ್ಕಳ ಅಕ್ಷರಶಃ ಜಲಾವೃತಗೊಂಡಿದೆ. ಅಂದಾಜು 4 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿರುವ ಮಾಹಿತಿ ಲಭ್ಯವಾಗಿದೆ ಎಂದರು
ಮುಟ್ಟಳ್ಳಿಯ ಮನೆಯ ಮೇಲೆ ಗಿಡ್ಡ ಕುಸಿತ ಪ್ರಕರಣದಲ್ಲಿ ನಾಲ್ವರು ಮೃತಪಟ್ಟಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡ ಹಿನ್ನೆಲೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮೃತರ ಕುಟುಂಬಕ್ಕೆ ಪರಿಹಾರದ ವಿಚಾರದಲ್ಲಿ ಈಗಾಗಲೇ ಸ್ಥಳದಿಂದಲೇ ದೂರವಾಣಿ ಕರೆ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದು 15 ದಿನದೊಳಗಾಗಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.