ಭಟ್ಕಳ: ಮುಟ್ಟಳ್ಳಿಯ ಮನೆ ಕುಸಿತಗೊಂಡ ಪ್ರದೇಶಕ್ಕೆ ಡಿಸಿ ಮುಲ್ಲೆöÊ ಮುಗಿಲನ್ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಅಗಸ್ಟ್ 1 ರ ರಾತ್ರಿಯಿಂದ 2 ಮುಂಜಾನೆ ತನಕ ಸುರಿದ ಭಾರೀ ಮಳೆಯ ಪ್ರಮಾಣ ರಾಜ್ಯದಲ್ಲಿ ಹಿಂದೆಂದೂ ಆಗದಂತಹ ಮಳೆಯು ಭಟ್ಕಳದಲ್ಲಿ ಸುರಿದಿದೆ. 550 ಮೀ.ಮೀ. ಮಳೆಯು ಭಟ್ಕಳ ತಾಲೂಕಿನಲ್ಲಿ ಸುರಿದಿದ್ದು, ಸಾಕಷ್ಟು ಮನೆಗಳು, ನಗರದ ಪ್ರಮುಖ ರಸ್ತೆಗಳು, ಗದ್ದೆ ಜಮೀನುಗಳು ಜಲಾವೃತಗೊಂಡ ವರದಿಗಳಾಗಿವೆ.
ಈಗಾಗಲೇ ನಾಲ್ಕು ಕಾಳಜಿ ಕೇಂದ್ರ ತೆರೆಯಲಾಗಿದ್ದು, ತಾಲೂಕಿನ 304 ಜನರು ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭಟ್ಕಳದಲ್ಲಿ ರಾತ್ರಿ 3 ಗಂಟೆಯಿAದ ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಕುಮಟಾ ಹಾಗೂ ಅಂಕೋಲಾದಿಂದ ಎಸ್.ಡಿ.ಆರ್.ಎಫ್ ತಂಡ ಭಟ್ಕಳದ ನಾನಾ ಕಡೆಗಳಲ್ಲಿ ಜಲಾವೃತಗೊಂಡ ಮನೆಗಳಿಂದ ಜನರನ್ನು ಸ್ಥಳಾಂತರಿಸಿದ್ದಾರೆ ಎಂದರು.
ಇನ್ನೂ ಮೂರು ದಿನಗಳ ಕಾಲ ಕರಾವಳಿಯನ್ನು ಮಳೆಯ ಹಿನ್ನೆಲೆ ರೆಡ್ ಅಲರ್ಟ ಘೋಷಣೆಯ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಮಂಗಳೂರು ಹಾಗೂ ಬೆಳಗಾವಿಯಿಂದ ಎಸ್.ಡಿ.ಆರ್.ಎಪ್. ತಂಡವನ್ನು ಕರೆಯಿಸಿಕೊಳ್ಳಲಾಗಿದೆ. ಅದೇ ರೀತಿ ನೇವಿಯ ತಂಡ ಮತ್ತು ಎಸ್.ಡಿ.ಆರ್.ಎಫ್ ತಂಡವನ್ನು ಸಹ ಗುಡ್ಡಗಾಡು ಪ್ರದೇಶದ ಹಾಗೂ ನದಿ ತೀರದ ಪ್ರದೇಶಗಳಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.
ಇನ್ನು ಭಟ್ಕಳವು ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಇಷ್ಟರ ಮಟ್ಟಿಗೆ ಇಲ್ಲವಾಗಿದ್ದು, ಭಾರೀ ಮಳೆಯಿಂದ ಆಕಸ್ಮಿಕ ದೊಡ್ಡ ಪ್ರವಾಹದಲ್ಲಿ ಸಿಲುಕಿರುವುದು ಬೇಸರದ ಸಂಗತಿಯಾಗಿದೆ. ಆದರೆ ಪ್ರವಾಹದಿಂದ ಯಾವುದೇ ಪ್ರಾಣ ಹಾನಿ ಸಂಭವಿಸದೇ ಇರುವುದು ಸಮಾಧಾನಕರ ವಿಚಾರವಾಗಿದೆ. ಮುಟ್ಟಳ್ಳಿಯಲ್ಲಿ ಮಾತ್ರ ಗುಡ್ಡ ಕುಸಿತದಿಂದ ನಾಲ್ವರು ಮೃತಪಟ್ಟಿದ್ದಾರೆ