ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಲಾನ್ ಬೌಲ್ ಮಹಿಳಾ ತಂಡ ಇತಿಹಾಸ

ನವದೆಹಲಿ: ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಲಾನ್ ಬೌಲ್ ಮಹಿಳಾ ತಂಡ ಇತಿಹಾಸ ಸೃಷ್ಟಿಸಿದೆ.

ಇದು ಕ್ರೀಡೆಯಲ್ಲಿ ಭಾರತದ ಮೊದಲ ಪದಕವಾಗಿದೆ ಮತ್ತು ತಂಡವು ಫೈನಲ್ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಲು ಉತ್ತಮ ಪ್ರದರ್ಶನವನ್ನು ನೀಡಿತು. ಈ ವಿಜಯವು ಅಭಿಯಾನದಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕವನ್ನು ನೀಡಿದೆ.

ಕಳೆದ ಮೂರು ದಿನಗಳ ಹಿಂದೆ ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಭಾರತ 16-13ರ ಅಂತರದಿಂದ ಗೆಲುವು ದಾಖಲಿಸಿತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದರು. ಇಂದಿನ ಫೈನಲ್‌ನಲ್ಲಿ ಸ್ವರ್ಣ ಪದಕಕ್ಕಾಗಿ ಅಮೋಘ ಹೋರಾಟ ನಡೆಸಿ, ಗೆಲುವು ದಾಖಲಿಸಿದ್ದಾರೆ. ಈ ಕ್ರೀಡೆಯಲ್ಲಿ ನ್ಯೂಜಿಲ್ಯಾಂಡ್ ಈಗಾಗಲೇ 40 ಪದಕ ಗೆದ್ದಿದೆ. ಇದೀಗ ಭಾರತ ಸಹ ಸ್ವರ್ಣಕ್ಕೆ ಮುತ್ತಿಕ್ಕುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ