ಕೊಹ್ಲಿಗೆ ಬೆಂಬಲ ಸೂಚಿಸಿದ ಪಾಕಿಸ್ತಾನ ಆಟಗಾರ.!

ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಅಜಮ್ ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ. ಕೊಹ್ಲಿ ಜೊತೆ ಇರೋ ಫೋಟೋ ಟ್ವೀಟ್ ಮಾಡಿರೋ ಬಾಬರ್ ಅಜಂ ‘ಈ ಸಂಕಷ್ಟದ ಸಮಯ ಆದಷ್ಟು ಬೇಗ ಕಳೆದು ಹೋಗಲಿದೆ. ಸದೃಢರಾಗಿರಿ’ ಎಂದು ಧೈರ್ಯ ತುಂಬೋ ಮಾತನಾಡಿದ್ದಾರೆ.

ಪಾಕಿಸ್ತಾನ ಮಾಜಿ ನಾಯಕ ಶಾಹೀದ್ ಆಫ್ರೀದಿ ಬಾಬರ್ ಟ್ವೀಟ್ ಶ್ಲಾಘಿಸಿದ್ದು ‘ವಿರಾಟ್ ಕೊಹ್ಲಿ ಅಜಂ ಟ್ವೀಟ್‌ಗೆ ಪ್ರತಿಕ್ರಿಯಿಸಬೇಕು. ಇದರಿಂದಾಗಿ ಹಳಸಿರುವ ಭಾರತ-ಪಾಕಿಸ್ತಾನ ಕ್ರೀಡಾ ಸಂಬಂಧ ಸುಧಾರಿಸಲಿದೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *