ಸಿಂಗಾಪುರ: ಭಾರತದ ಬ್ಯಾಡ್ಮಿಟನ್ ಆಟಗಾರ್ತಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಫೈನಲ್ ಪಂದ್ಯ ಗೆಲ್ಲುವ ಮೂಲಕ 2022ರ ಮೊದಲ ಸೂಪರ್ 500 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಾಂಗ್ ಝಿಯಿ ರನ್ನು 21-9, 11-21, 21-15 ರಲ್ಲಿ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸೆಮಿಫೈನಲ್ ಪಂದ್ಯದಲ್ಲಿ 21-15, 21-7 ರ ನೇರ ಸೆಟ್‌ಗಳಲ್ಲಿ ಕೇವಲ 32 ನಿಮಿಷಗಳಲ್ಲಿ ಪಂದ್ಯ ಗೆದ್ದ ಸಿಂಧು, ಫೈನಲ್ ಪಂದ್ಯದಲ್ಲಿ ಒಂದು ಸೆಟ್ ಬಿಟ್ಟುಕೊಟ್ಟು, ಮೂರನೇ ಸೆಟ್ ಗೆಲ್ಲುವ ಮೂಲಕ ಚೀನಾದ ಆಟಗಾರ್ತಿಯನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.