ಕಳಪೆ ಪ್ರದರ್ಶನದ ಟೀಕೆಗೆ ಕೊಹ್ಲಿ ತಿರುಗೇಟು.!

ನವದೆಹಲಿ: ಕಳಪೆ ಪ್ರದರ್ಶನದಿಂದ ಭಾರೀ ಟೀಕೆಗೊಳಗಾಗಿರುವ ವಿರಾಟ್ ಕೊಹ್ಲಿ ಕೊನೆಗೂ ಮೌನ ಮುರಿದಿದ್ದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಒಂದೇ ಸಾಲಿನಲ್ಲಿ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಕಳೆದ ಕೆಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಟೀಕೆಗಳು ಕೊಹ್ಲಿ ವಿರುದ್ಧ ಕೇಳಿಬಂದಿತ್ತು. ಅದರಲ್ಲೂ ಕ್ರಿಕೆಟಿಗರಿಂದಲೇ ಕೊಹ್ಲಿ ಟೀಕೆಗೊಳಗಾಗಿದ್ದರು. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೊಹ್ಲಿ ಕುರಿತು ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕೊಹ್ಲಿಯನ್ನು ಪಂದ್ಯದಿಂದಲೇ ತೆಗೆಯಬೇಕೆಂದು ಆಗ್ರಹಿಸಿದ್ದರು. ಇದಾದ ನಂತರ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಕೊಹ್ಲಿ ಬಗ್ಗೆ ಮತ್ತೆ ಟೀಕೆ ಮಾಡಿದ್ದರು.

ಸದ್ಯ ಇವೆಲ್ಲಾ ಟೀಕೆಗಳ ಬಗ್ಗೆ ವಿರಾಟ್ ಕೊಹ್ಲಿ ಕೊನೆಗೂ ಮೌನ ಮುರಿದಿದ್ದಾರೆ. ಒಂದೇ ಸಾಲಿನಲ್ಲಿ ಸೂಕ್ತವಾದ ಚಿತ್ರದೊಂದಿಗೆ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *