ಮಂಗಳೂರು: ಹಿಜಾಬ್ ಹಿಂದಿನ ಶಕ್ತಿಗಳೇ ಪ್ರವೀಣ್ ನೆಟ್ಟಾರ್ ಹತ್ಯೆಯ ಹಿಂದಿವೆ. ಬೇಕಾದರೆ ಸೈದ್ಧಾಂತಿಕವಾಗಿ ಯಾವುದೇ ರೀತಿಯ ಹೋರಾಟ ಮಾಡಲಿ. ಆದರೆ ಈ ರೀತಿಯ ಹೀನಾಯ ಕೃತ್ಯ ನಡೆಸುವುದು ಸರಿಯಲ್ಲ. ಇಂತಹ ಮತೀಯ ಕೃತ್ಯ ರಾಜ್ಯದಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈಗಾಗಲೇ ಪೊಲೀಸರು ಹಲವು ತಂಡ ಮಾಡಿಕೊಂಡು ಅನೇಕ ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ. ರಾಜ್ಯದ ಗಡಿ ಭಾಗದಲ್ಲಿ ಈ ಕೃತ್ಯ ನಡೆದಿರುವುದರಿಂದ ಆರೋಪಿಗಳು ನೆರೆ ರಾಜ್ಯದಲ್ಲಿ ತಲೆಮರಿಸಿಕೊಳ್ಳುವ ಅನುಮಾನ ಇರುವುದರಿಂದ ಅಲ್ಲಿನ ಪೊಲೀಸರ ನೆರವಿನಿಂದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಆದಷ್ಟು ಬೇಗ ಕೃತ್ಯ ನಡೆಸಿದವರನ್ನು ಬಂಧಿಸಲಾಗುದು ಎಂದು ಅರಗ ಜ್ನಾನೇಂದ್ರ ಹೇಳಿದ್ದಾರೆ.