ಭಟ್ಕಳ: ಅತಿವೃಷ್ಟಿಯಿಂದಾಗಿ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಸರ್ಕಾರ ತಕ್ಷಣವೇ ಪ್ರತಿ ಮೀನುಗಾರರ ಕುಟುಂಬಕ್ಕೆ ರೂ.1 ಲಕ್ಷ ರೂ ಪರಿಹಾರ ನೀಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾ ಸಮಿತಿ ತಹಸಿಲ್ದಾರರಿಗೆ ಆಗ್ರಹಿಸಿದೆ. ಈ ಕುರಿತು ಜಿಲ್ಲಾ ಸಮಿತಿಯ ನಿಯೋಗವು ತಹಸಿಲ್ದಾರರ ಸುಮಂತ್ ಬಿ. ಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬ ಭರಿಸಲಾಗದ ನೋವಿನಲ್ಲಿದೆ. ತಾಲೂಕಾಡಳಿತ ತಕ್ಷಣವೇ ಸ್ಪಂಧಿಸುವುದರ ಮೂಲಕ ಬಡಮೀನುಗಾರರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಖಜಾಂಚಿ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಫಾರೂಕ್ ಶೇಕ್, ಯುವ ಮುಖಂಡ ಝಹೂರ್ ಲಾಟ್ ಮುಂತಾದವರು ಹಾಜರಿದ್ದರು.