ಜೋಯಿಡಾ: ತಾಲೂಕಿನ ಅಣಶಿ ಘಟ್ಟದಲ್ಲಿ ಭೂ ಕುಸಿತಗೊಂಡು ಬೆಳಗಾವಿ-ಕಾರವಾರ ರಾಜ್ಯ ಹೆದ್ದಾರಿ 32 ಸಂಪೂರ್ಣ ಬಂದ್ ಆಗಿದೆ. ಕಳೆದ ತಿಂಗಳು ಗುಡ್ಡ ಕುಸಿತವಾಗಿ ಒಂದು ವಾರಗಳ ಕಾಲ ಜಿಲ್ಲಾಡಳಿತ ವಾಹನ ಸಂಚಾರ ಬಂದ್ ಮಾಡಿತ್ತು. ಕುಸಿತದ ಆತಂಕದಿಂದ ಲಘು ವಾಹನಕ್ಕೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಇಂದು ಈ ಹಿಂದೆ ಕುಸಿತವಾದ ಜಾಗದಲ್ಲೇ ಮತ್ತೆ ಗುಡ್ಡ ಕುಸಿತವಾಗಿದೆ. ಸ್ಥಳೀಯ ಆಡಳಿತದಿಂದ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.