ಜೋಯಿಡಾ: ತಾಲೂಕಿನ ಅನಮೋಡ ಚೆಕ್ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು ಗೋವಾ ಮದ್ಯವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಂದ್ರಪ್ರದೇಶದ ವೆಂಕಟಸುಬ್ಬಯ್ಯ ಎಂಬಾತ ಆರೋಪಿಯಾಗಿದ್ದಾನೆ.
ಕಾರಿನಲ್ಲಿ ಗುರುವಾರ ಸಂಜೆ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ 63 ಲೀಟರ್ ಗೋವಾ ಮದ್ಯ ಸಾಗಿಸುತ್ತಿದ್ದಾಗ ತಪಾಸಣೆ ನಡೆಸಿದ ಅಧಿಕಾರಿಗಳು ಸಾಗಾಟಕ್ಕೆ ಬಳಸಿದ್ದ ಮಹಿಂದ್ರ ವಿರಿಟೊ ಸೇರಿ 3,07,040 ರೂ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಕಾರವಾರದ ಜಿಲ್ಲಾ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ತಿಳಿಸಿದರು.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ಶ್ರೀಕಾಂತ. ಬಿ. ಅಸೋದೆ, ಅಬಕಾರಿ ಪೇದೆಗಳಾದ ರಾಜು ಭಟ್ಕಳ್, ಉಳವಪ್ಪ ತುಳಜಿ ಪಾಲ್ಗೊಂಡಿದ್ದರು.