ಜೊಯಿಡಾ: ಕಸ್ತೂರಿ ರಂಗನ್ ವರದಿ ವೈಜ್ಞಾನಿಕ ವರದಿ ಅಲ್ಲ. ಸ್ಥಳಕ್ಕೆ ಬಂದು ಮಾಡಿದ ವರದಿ ಅಲ್ಲ ಹಾಗಾಗಿ ಈ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೇವೆ ಎಂದು ಅರ್.ವಿ ದೇಶಪಾಂಡೆ ಹೇಳಿದರು. ಅವರು ಸೋಮವಾರ ಜೊಯಿಡಾದಲ್ಲಿ ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯ ಘೋಷಣೆಯನ್ನು ವಿರೋಧಿಸಿ ನಡೆದ ಪ್ರಟಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸರಕಾರ ಇದ್ದಾಗ ಸಚಿವ ಸಂಪುಟದ ಉಪ ಸಮಿತಿ ಮಾಡಿ ಕಸ್ತೂರಿ ರಂಗನ್ ವರದಿ ವಿರೋಧಿಸುವ ನಿರ್ಣಯ ಮಾಡಿದ್ದೆವು ಎಂದರು.
ಜೊಯಿಡಾ ಶಿವಾಜಿ ಸರ್ಕಲ್ಲಿನಿಂದ ತಹಸಿಲ್ದಾರ ಕಚೇರಿಯ ತನಕ ಮೆರವಣಿಗೆಯಲ್ಲಿ ಬಂದ ಜನರು ಜೊಯಿಡಾ ತಹಸಿಲ್ದಾರ ಸಂಜಯ ಕಾಂಬಳೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ವಿ ದೇಶಪಾಂಡೆ, ಮಾಜಿ ಜಿ.ಪಂ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ಸೇರಿದಂತೆ ಸಾರ್ವಜನಿಕರು, ಕಾಂಗ್ರೇಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.