ಕಾರವಾರ: ರಾಜ್ಯದಲ್ಲಿ ಯಾವುದೇ ಇಂಟಲಿಜೆನ್ಸ್ ಫೇಲ್ ಆಗಿಲ್ಲ ಸ್ಟ್ರಾಂಗ್ ಆಗೇ ಇದೆ. ನಮ್ಮ ಸರ್ಕಾರ ಗುಪ್ತಚರ ದಳವನ್ನು ಮತ್ತಷ್ಟು ಬಲ ಪಡಿಸಿದೆ. ಕೆಲ ಘಟನೆಗಳು ಮುನ್ಸೂಚನೆ ಇಲ್ಲದೆ ನಡೆಯುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಕಾರವಾರದಲ್ಲಿ ಹೇಳಿದ್ದಾರೆ.
ಅಮಿತ್ ಷಾ ಬಂದು ಹೋದ ಮೇಲೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ವಿಚಾರಕ್ಕೆ ಕೋಟಾ ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಯಾವ ನಾಯಕತ್ವ ಬದಲಾವಣೆಯೂ ಆಗುವುದಿಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ಸಿದ್ದರಾಮೋತ್ಸವ ನಂತರ ಬಿಜೆಪಿ ಯಾವ ಉತ್ಸವದ ಪ್ಲಾನ ಮಾಡಿಕೊಂಡಿದೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ ಅವರ ವೈಯಕ್ತಿಕ ವಿಚಾರವಾಗಿದೆ. ಅವರು ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಈ ಉತ್ಸವದಿಂದ ನಮ್ಮ ಪಕ್ಷಕ್ಕೆ ಯಾವುದೇ ಆತಂಕವಿಲ್ಲ. ನಮ್ಮ ಪಕ್ಷ ಭೂತ್ ಮಟ್ಟದಿಂದ ಸ್ಟ್ರಾಂಗ್ ಇದೆ ಎಂದು ಹೇಳಿದರು.
ಬಿಜೆಪಿಯಿಂದ ಯಡಿಯೂರಪ್ಪರನ್ನ ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ನಾಯಕತ್ವದಲ್ಲಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಇನ್ನು ಮುಂದೆಯೂ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿ ಗೆಲವು ಸಾಧಿಸುತ್ತೆ ಎಂದು ಹೇಳಿದರು.