ಅಂಕೋಲಾ : ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ಕಾಲೇಜಿನಲ್ಲಿ ಗ್ರಾಮೀಣ ಉದ್ಯಮಶೀಲತೆಯ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಇಂದು ಒಂದು ದಿನದ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ.
ಮುಂಜಾನೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಪ್ರಗತಿಪರ ರೈತರಾದ ರಾಯಚೂರಿನ ಕವಿತಾ ಮಿಶ್ರಾ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಧಾರವಾಡ ಸಿಡೊಕ್ ಮಾಜಿ ನಿರ್ದೇಶಕ ಬಿಎಸ್ ರೇವಣಕರ ‘ಐಡಿಯಾ ಜನರೇಶನ್ ಮತ್ತು ವ್ಯಾಲಿಡೇಸನ್’ ವಿಷಯದ ಕುರಿತು ಮಾತನಾಡಲಿದ್ದಾರೆ. ಪರಿಸರ ಶಾಸ್ತ್ರಜ್ಞ ಬಾಲಚಂದ್ರ ಹೆಗಡೆ ‘ಪರಿಸರ ಸ್ನೇಹಿ ಗ್ರಾಮೀಣ ಉದ್ಯಮಶೀಲತೆ’ ವಿಷಯದ ಕುರಿತು ಮಾತನಾಡಲಿದ್ದು, ನಂತರ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಪಾಲಕರು, ಕಾಲೇಜು ಅಭಿವೃದ್ಧಿ ಸಮಿತಿ, ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಾಚಾರ್ಯೆ ಡಾ. ಶಾರದಾ ಭಟ್ ತಿಳಿಸಿದ್ದಾರೆ.