ಆವರ್ಸಾ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಉಳ್ವೇಕರ್.! ಶಿಕ್ಷಕರೊಂದಿಗೆ ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚೆ

ಅಂಕೋಲಾ: ತಾಲೂಕಿನ ಅವರ್ಸಾ ಗ್ರಾಮದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ ಅವರು ದಿಢೀರ್ ಭೇಟಿ ನೀಡಿ ಶಾಲೆಯ ಕಟ್ಟಡ ಪರಿಶೀಲನೆ ನಡೆಸಿದರು.

ಬಳಿಕ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಕೆಲ ಕಾಲ ಶಾಲಾ ಮುಖ್ಯಧ್ಯಾಪಕರ ಹಾಗೂ ಶಿಕ್ಷಕರ ಜೊತೆಗೆ ಚರ್ಚೆ ನಡೆಸಿದರು. ಇದೇ ವೇಳೆ ಶಿಕ್ಷಕರು ಶಾಲೆಯಲ್ಲಿ ಶೌಚಾಲಯ ಅವಶ್ಯಕತೆ ಇದೆ ಹಾಗೂ ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದರು. ಜೊತೆಗೆ ಶಿಕ್ಷಕರ ನೇಮಕಾತಿ ಬಗ್ಗೆ ಮನವಿ ಮಾಡಿದರು.

ಈಗಾಗಲೇ ಈ ಶಾಲೆಗೆ 125 ವರ್ಷ ಆಗಿರುವ ಕಾರಣ ಶಾಲೆಗೆ ಕೆಲವು ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಎಂದು ಶಿಕ್ಷಕರು ಹಾಗೂ ಶಾಲೆಯ ಮುಖ್ಯೋಧ್ಯಾಪಕರು ವಿಧಾನ ಪರಿಷತ್ ಶಾಸಕರ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದನೆ ನೀಡಿದ ವಿಧಾನ ಪರಿಷತ್ ಶಾಸಕರು ನನ್ನ ಈ ಅವಧಿಯಲ್ಲಿ ಈ ಶಾಲೆಗೆ ಯಾವ ರೀತಿ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡಿತ್ತೇನೆ ಎಂದು ಭರವಸೆ ನೀಡಿದರು.