ಮಹಿಳೆ ಸ್ನಾನ ಮಾಡುತ್ತಿರುವಾಗ ವಿಡಿಯೋ ಮಾಡುತ್ತಿದ್ದ ಕಾಮುಕನ ಬಂಧನ

ಅಂಕೋಲಾ : ಮಹಿಳೆಯೊಬ್ಬಳು ಸ್ನಾನಮಾಡುವಾಗ, ಇಣುಕಿ ನೋಡಿ ವಿಡಿಯೋ ಮಾಡಿದ ಆರೋಪದ ಮೇಲೆ ವ್ಯಕ್ತಿಯರ‍್ವನನ್ನು ಬಂದಿಸಿರುವ ಘಟನೆ ತಾಲೂಕಿನ ಗಾಬಿತಕೇಣಿಯಲ್ಲಿ ನಡೆದಿದೆ. ಕೇಣಿಯ ಮಾರುತಿ ಬುದ್ದು ನಾಯ್ಕ (34) ಬಂಧಿತ ಆರೋಪಿ.

ನಡೆದದ್ದೇನು.?

ಗಾಬಿತವಾಡಾದಲ್ಲಿರುವ ತನ್ನ ಮನೆಯಲ್ಲಿ ಮಹಿಳೆಯೊಬ್ಬಳು ಬೆಳಿಗ್ಗೆ 6 ಜಾವ ಸ್ನಾನ ಮಾಡುತ್ತಿರುವಾಗ, ಬಾತರೂಂ ಹತ್ತಿರದ ಕಪೌಂಡ ಮೇಲೆ ಹತ್ತಿ, ಸ್ನಾನ ಮಾಡುತ್ತಿರುವದನ್ನು ಇಣುಕಿ ನೋಡಿದಲ್ಲದೇ, ವಿಡಿಯೋ ಮಾಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

ಪಿಎಸೈ ಪ್ರವೀಣಕುಮಾರ ಹಾಗೂ ಮಹಾಂತೇಶ ಅವರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.