ರಸ್ತೆ ದಾಟುತ್ತಿದ್ದ ಜಿಂಕೆಗೆ ಲಾರಿ ಡಿಕ್ಕಿ: ಗಂಭೀರ ಗಾಯಗೊಂಡ ಜಿಂಕೆ ಸ್ಥಳದಲ್ಲೇ ಸಾವು

ಮುಂಡಗೋಡ: ಜಿಂಕೆಯೊಂದು ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ಜಿಂಕೆ ಸಾವನ್ನಪ್ಪಿದ ಘಟನೆ ಪಟ್ಟಣದ ಹುಬ್ಬಳ್ಳಿ ರಸ್ತೆಯ ಎಪಿಎಮ್‌ಸಿ ಹತ್ತಿರದ ಕೆಂಪಟ್ಟಿ ಏರಿಯ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.

ಪಟ್ಟಣದ ಹುಬ್ಬಳ್ಳಿ ರಸ್ತೆಯ ಎಪಿಎಮ್‌ಸಿ ಹತ್ತಿರದ ಕೆಂಪಟ್ಟಿ ಏರಿಯ ಹತ್ತಿರ ಜಿಂಕೆ ರಸ್ತೆ ದಾಟುತ್ತಿತ್ತು. ಆಗ ಆಕಸ್ಮಿಕವಾಗಿ ಲಾರಿಯೊಂದು ಜಿಂಕೆಗೆ ಡಿಕ್ಕಿ ಹೊಡೆದಿದೆ. ಇನ್ನು ಅದೇ ಲಾರಿಯ ಹಿಂದೆ ಬರುತ್ತಿದ್ದ ಬಸ್ ಕೂಡ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದೆ.

ಮಾನವಿಯತೆಯ ದೃಷ್ಟಿಯಿಂದ ಚಾಲಕ ಬಸ್‌ನ್ನು ನಿಲ್ಲಿಸಿ ಜಿಂಕೆಯನ್ನು ನೋಡುವಷ್ಟರಲ್ಲಿ ಜಿಂಕೆ ಮೃತಪಟ್ಟಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಧಿಕಾರಿಗಳು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.