ಮುಂಡಗೋಡ: ಯುವಕನೊಬ್ಬ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ತಾಲೂಕಿನ ಕ್ಯಾಸನಕೇರಿ ಗ್ರಾಮದ ಯುವಕನೇ ಆರೋಪಿತನಾಗಿದ್ದಾನೆ.
ಆರೋಪಿತ 2022ರ ಹೊಸ ವರ್ಷದ ಮೊದಲನೇ ದಿನ ಹಾಗೂ ನಂತರ ಬಾಲಕಿಯನ್ನು 2-3 ಬಾರಿ ಬಾಚಣಕಿ ಜಲಾಶಯದ ಹತ್ತಿರ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ವಿಷಯವನ್ನು ಹೇಳಿದರೆ ನಿನ್ನ ಜೀವ ತೇಗೆಯುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಪ್ರಾಪ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸಿಪಿಐ ಎಸ್ ಎಸ್ ಸಿಮಾನಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.