ಸಿದ್ದಾಪುರ ( ಉ. ಕ ): ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ರೈತ ಮುಖಂಡ ವೀರಭದ್ರ ನಾಯ್ಕ್ ಒತ್ತಾಯ


ಸಿದ್ದಾಪುರ : ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಬಡವರು ಕೂಲಿ ಕಾರ್ಮಿಕರು ರೈತರು ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರದಲ್ಲಿ ಇಂದಿರ ಕ್ಯಾಂಟೀನ್ ನಿರ್ಮಾಣ ಮಾಡಬೇಕು ಎಂದು ರೈತ ಮುಖಂಡ ವೀರಭದ್ರ ನಾಯ್ಕ್ ಒತ್ತಾಯ ಮಾಡಿದ್ದಾರೆ
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ಬಂದಿತ್ತು ನಂತರ ಬಿಜೆಪಿ ಸರಕಾರ ಬಂದ ಮೇಲೆ ಇದಕ್ಕೆ ಪ್ರಾಮುಖ್ಯತೆ ನೀಡದೆ ಇರುವುದರಿಂದ ಯೋಜನೆ ಜನತೆಗೆ ತಲುಪಲಿಲ್ಲ ಮತ್ತೆ ಸಿದ್ದರಾಮಯ್ಯ ನವರು ಮತ್ತೆ ಮುಖ್ಯಮಂತ್ರಿ ಗಳಾಗಿದ್ದು ಆ ಯೋಜನೆ ಅನುಷ್ಠಾನ ಆಗಬೇಕು
ತಾಲೂಕಿನ ಬಡವರು ಕಟ್ಟಡ ಕಾರ್ಮಿಕರು ದಿನಗೂಲಿ ಜನರು ಹೆಚ್ಚಿನ ಹಣ ನೀಡಿ ಊಟ ಮಾಡುವ ಪರಿಸ್ಥಿತಿ ಇದೆ ಇದರಿಂದ ದುಡಿದ ಹಣ ಊಟಕ್ಕೆ ವ್ಯಯವಾಗುತ್ತಿದೆ ಇಂದಿರಾ ಕ್ಯಾಂಟೀನ್ ಮೂಲಕ ಕಡಿಮೆ ದರದಲ್ಲಿ ಊಟ ಸಿಕ್ಕರೆ ಬಡವರು ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಅಲ್ಲದೆ ಹಣವು ಉಳಿಯುತ್ತದೆ ಹಾಗಾಗಿ ಇಲ್ಲಿನ ಶಾಸಕರು ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು ಈ ಸಂದರ್ಭದಲ್ಲಿ ಪ್ರಮುಖರಾದ ದಿನೇಶ್ ಬೇಡ್ಕಣಿ, ರೇವಣ್ಣ ಶಿರಳಗಿ,ಜಿ ಸಿ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು