ಸಿದ್ದಾಪುರ : ನಾಮಧಾರಿ ಈಡಿಗ ಶಾಸಕರಿಗೆ ಮಂತ್ರಿ ಸ್ಥಾನ ಕ್ಕೆ ದೇವರಿಗೆ ಪೂಜೆ ಸಲ್ಲಿಕೆ

ಸಿದ್ದಾಪುರ : ಸಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಡು, ಸೊರಬದಲ್ಲಿ ಮಧು ಬಂಗಾರಪ್ಪ ಸಾಗರದಲ್ಲಿ ಬೇಳೂರು, ಗೋಪಾಲಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದು ಮಂತ್ರಿ ಸ್ಥಾನ ಸಿಗಲೆಂದು ಶ್ರೀ ನಾಗಚೌಡೇಶ್ವರಿ ಯುವ ಗೆಳೆಯರ ಬಳಗ ಸಂಪಖಂಡ ದ ಗೆಳೆಯರ ಬಳಗದವರು ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು


ಸಂಘದ ಅಧ್ಯಕ್ಷ ಸುನಿಲ್ ನಾಯ್ಕ್ ಮಾತನಾಡಿ ನಮ್ಮ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯಕರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ ಹಾಗೂ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರವರು ಮತ್ತೊಮ್ಮೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ ಹಾಗಾಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ ಅವರಿಗೆ ಮಂತ್ರಿಮಂಡಲದಲ್ಲಿ ಸ್ಥಾನಮಾನಗಳು ಸಿಗಲೆಂದು ದೇವರಿಗೆ ಪ್ರಾರ್ಥನೆ ನಡೆಸಿ ಪೂಜೆಯನ್ನು ಸಲ್ಲಿಸಿದ್ದೇವೆ ಎಂದರು
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ, ಅರುಣ್ ಕುಮಾರ್ ಸಹ ಕಾರ್ಯದರ್ಶಿ ಮನೋಜ ಸದಸ್ಯರಾದ ಕಾರ್ತಿಕ, ವಿನಾಯಕ, ದಿವಾಕರ್
ಸಂಪಖಂಡ ಮುಂತಾದವರು ಉಪಸ್ಥಿತರಿದ್ದರು