ಸಿದ್ದಾಪುರ : ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಮೋಹನ್ ಗೌಡ ಕಿಲವಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನ ಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ನಿಂತು ಗೆದ್ದು ತೋರಿಸಲಿ ಎಂದು ಎನ್.ಎಲ್. ಗೌಡ ಕಿಲವಳ್ಳಿ ಸವಾಲು ಹಾಕಿದ್ದಾರೆ.
ತಮ್ಮ ನಿವಾಸದಲ್ಲಿ ಪಕ್ಷದ ಪ್ರಮುಖರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಒಂದುವೇಳೆ ಹಾಗೆ ಮಾಡಿ ಗೆದ್ದರೆ ನಮಗೆ ಸಂತೋಷ ಇಲ್ಲವಾದರೆ ಯಾವುದೊ ಆಮಿಷ ಕ್ಕೆ ಒಳಗಾಗಿ ಬಿಜೆಪಿ ಸೇರಿದ್ದಾರೆ ಎಂದು ನಾವು ಭಾವಿಸಿಕೊಳ್ಳುತ್ತೇವೆ ಎಂದರು. ಆತನನ್ನು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸಿ ಜನರ ಬಹುಮತದೊಂದಿಗೆ ಆರಿಸಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಅವರು ಏಕೈಕ ಈ ರೀತಿ ತೀರ್ಮಾನ ತೆಗೆದುಕೊಂಡಿರುವುದು ನಮ್ಮ ವಿರೋಧವಿದೆ ಎಂದರು.
ಶಿರಸಿ ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಮಾತನಾಡಿ, ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗಿದೆ ಎಂದು ಕಾಗೇರಿಯವರು ಹೇಳಿಕೆ ನೀಡಿರುವುದು ಅವರ ಸ್ಥಾನಕ್ಕೆ ಕಳಂಕ ತರುವಂತದ್ದಾಗಿದೆ. ಮಾನಸಿಕ ಅಸ್ತಿರತೆಯಿಂದ ಈ ರೀತಿ ಹೇಳಿಕೆ ನೀಡಿರಬಹುದು ಮೋಹನಗೌಡ ಅವರಿಂದ ರಾಜೀನಾಮೆ ಕೊಡಿಸಿ ಗೆಲ್ಲಿಸಲು ಪ್ರಯತ್ನಿಸಲಿ ಆಗ ಕಾಗೇರಿಯವರ ತಾಕತ್ ಎಷ್ಟಿದೆ ಎಂದು ತಿಳಿಯುತ್ತದೆ ಇಲ್ಲವಾದರೆ ನಿಮ್ಮ ಬಗೆಗಿನ ನೂರಾರು ಪ್ರಕರಣಗಳ ದಾಖಲೆಗಳು ನಮ್ಮ ಬಳಿಇವೆ ಮಾಧ್ಯಮದ ಮೂಲಕ ಒಂದೊಂದೇ ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಸತೀಶ್ ಹೆಗಡೆ ಪ್ರಮುಖರಾದ ಹರೀಶ್ ಗೌಡರ್ ಶ್ರವಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.