ಸಿದ್ದಾಪುರ : ಕಾರಿನಲ್ಲಿ ಅನಧಿಕೃತ ಮಧ್ಯ ಸಾಗಾಟ ಮಾಡುತ್ತಿರುವಾಗ ಅಬಕಾರಿ ಇಲಾಖೆಯವರು ಆರೋಪಿ ಬಂಧಿಸಿ ಮದ್ಯ ಹಾಗೂ ಸ್ವಿಫ್ಟ್ ಡಿಸೈರ್ ಕಾರ್ ವಶಕ್ಕೆ ಪಡೆದು ಪ್ರಕರಣ ದಾಖಳಿಸಿದ್ದಾರೆ
ತಾಲೂಕಿನ ಹಲಗೇರಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ತಪಾಸಣೆ ನಡೆಸುತ್ತಿದ್ದಾಗ ತಾಲೂಕಿನ ಹೆಜನಿ ಗ್ರಾಮಕ್ಕೆ ಹೋಗುವ ಕ್ರಾಸ್ ಬಳಿ, ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ
, ಸ್ವಿಫ್ಟ್ ಡಿಸೈರ್ ಕಾರ್ ನೋಂದಣಿ ಸಂಖ್ಯೆ KA- 47/9498 ರಲ್ಲಿ ನಾಲ್ಕು ರಟ್ಟಿನ ಪೆಟ್ಟಿಗೆಗಳಲ್ಲಿ 650 ಎಮ್.ಎಲ್. ಅಳತೆಯ 48 ಬಿಯರ್ ಹಾಗೂ 180 ಎಮ್.ಎಲ್.ಅಳತೆಯ 48 ಹಾಗೂ 90ಎಮ್.ಎಲ್. ಅಳತೆಯ 96 ವಿಸ್ಕಿಯ ಟೆಟ್ರಾಪ್ಯಾಕ್ ಗಳನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ, ಸ್ವತ್ತುಗಳನ್ನು ಜಪ್ತುಪಡಿಸಿ, ಆರೋಪಿಯಾದ ಗಣೇಶ ಮಾದೇವ ನಾಯ್ಕ ಕಬ್ಬಿನಹಕ್ಕಲ ಗ್ರಾಮ, ಡ್ಯಾಮ್ ಕ್ರಾಸ್, ನಗರಬಸ್ತಿಕೇರಿ ಗೇರುಸೊಪ್ಪ ಹೊನ್ನಾವರ ಎಂಬಾತನನ್ನು ಬಂಧಿಸಿ , ಪ್ರಕರಣ ದಾಖಲಿಸಿದ್ದಾರೆ ಜಪ್ತುಪಡಿಸಿದ ವಾಹನದ ಅಂದಾಜು ಮೌಲ್ಯ ರೂ. 6.00 ಲಕ್ಷಗಳು ಆಗಿದ್ದು, ಬಿಯರ್ ಮತ್ತು ಮದ್ಯದ ಮೌಲ್ಯ ರೂ12,816/-.- ಆಗಿರುತ್ತದೆ.
ಮಾನ್ಯ ಅಬಕಾರಿ ಜಂಟಿ – ಆಯುಕ್ತರು ಮಂಗಳೂರು ವಿಭಾಗ ಮಂಗಳೂರು ಮತ್ತು ಮಾನ್ಯ ಅಬಕಾರಿ ಉಪಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದಲ್ಲಿ, ಮಾನ್ಯ ಅಬಕಾರಿ ಉಪ ಅಧಿಕ್ಷಕರು ಶಿರಸಿ ಉಪ- ವಿಭಾಗ ಇವರ ಮಾರ್ಗದರ್ಶನದಂತೆ ,ಮಹೇಂದ್ರ ಎಸ್. ನಾಯ್ಕ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳಾದ ಲೋಕೇಶ್ವರ ವಿ. ಬೋರ್ಕರ್ ಮತ್ತು ಗಜಾನನ ಎಸ್. ನಾಯ್ಕ ಇವರುಗಳೊಂದಿಗೆ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ..