೩೦ ದಿನದಲ್ಲಿ ಇ- ಖಾತಾ ನೀಡಿ ಪೌರಾಡಳಿತ ಅಧಿಕಾರಿಗಳಿಗೆ ಹೈಕೋರ್ಟ್ ತಾಕೀತು | ಸಾವಿರಾರು ಆಸ್ತಿ ಮಾಲಕರಿಗೆ ಆಶಾಭಾವ

ಶಿರಸಿ:- ನಗರ ಪ್ರದೇಶದಲ್ಲಿ ಆಸ್ತಿಹೊಂದಿರುವ ಮಾಲಕರು ಅರ್ಜಿ ಸಲ್ಲಿಸಿದ ೩೦ ದಿನದಲ್ಲಿ ಸಂಬAಧಿತ ಪೌರಾಡಳಿತ ಇ-ಖಾತಾ ನೀಡಬೇಕು. ಇಲ್ಲದಿದ್ದರೆ ಕಾರಣ ಸಹಿತ ವಿವರಣೆಯನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಬೇಕೆಂದು ಕರ್ನಾಟಕ ಹೈಕೋರ್ಟ್ ತಾಕೀತು ಮಾಡಿದೆ. ಈ ಮೂಲಕ, ಉತ್ತರಕನ್ನಡ ಜಿಲ್ಲೆಯಲ್ಲಿ ಇ-ಖಾತೆ ಹಾಗೂ ಫಾರಂ ನಂ ೩ ಸಮಸ್ಯೆಯಿಂದ ಪರದಾಡುತ್ತಿರುವ ಸಾವಿರಾರು ಆಸ್ತಿ ಮಾಲಕರಿಗೆ ಆಶಾಭಾವ ಮೂಡಿಸಿದೆ.

ಕರ್ನಾಟಕ ಹೈಕೋರ್ಟ್ನ ನ್ಯಾ. ಸೂರಜ್ ಗೋವಿಂದ ರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಹೊರಡಿಸಿರುವ ಈ ಮಹತ್ವದ ಆದೇಶದಲ್ಲಿ ,ಇ-ಸುಗಮ ನಿಯಮಗಳ ಪ್ರಕಾರ ಇ_ಖಾತೆ ಕೋರಿ ಅರ್ಜಿ ಸಲ್ಲಿಸಿದ ೩೦ ದಿನಗಳಲ್ಲಿ ದಾಖಲೆ ನೀಡಬೇಕು ಕೈಬರಹದ ಖಾತೆ ನೀಡಿ ಇ-ಖಾತೆಗಾಗಿ ಅರ್ಜಿ ಸಲ್ಲಿಸಿದ ಅಲ್ಪ ಅವಧಿಯಲ್ಲೇ ಇ-ಖಾತೆಯನ್ನು ನೀಡಬೇಕು ಎಂದು ಸೂಚಿಸಿದೆ.
ಅಂತೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಅರ್ಜಿಯ ಪರಿಗಣನೆ, ಮುಂದುವರಿಕೆ,ವಿಲೇವಾರಿಗೆ ಸೂಕ್ತ ವಿಧಾನವನ್ನು ಅಭಿವೃದ್ಧಿಪಡಿಸಿ ಅದನ್ನು ಜಾರಿಗೊಳಿಸೇಕು ಎಂದು ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಉಚ್ಛ ನ್ಯಾಯಾಲಯದ ನ್ಯಾಯಪೀಠ ನಿರ್ದೇಶನ ನೀಡಿದೆ.
ಆರ್‌ಟಿಸಿಯನ್ನು ಪರಿಗಣಿಸಬಹುದೆ? ಶಿರಸಿ ನಗರದಲ್ಲಿ ಸುಮಾರು ೧೫ ಸಾವಿರ ಆಸ್ತಿಗಳ ಮಾಲಕತ್ವ ದೃಢೀಕರಣಕ್ಕೆ ಈ ಹಿಂದೆ ಇರುವ ದಾಖಲೆಯಾದ ಆರ್‌ಟಿಸಿ ಯನ್ನು ಅರ್ಜಿ ಜತೆಯ ದಾಖಲೆಯಾಗಿ ಪರಿಗಣಿಸುವ ಬದಲಾಗಿ ಇನ್ನಾವುದೇ ದಾಖಲೆ ಮಾಲಕತ್ವ ಸಾಬೀತು ಪಡಿಸಲು ಇರದಾಗ ಇ-ಖಾತೆ ಮಾಡಿಸುವ ಅಥವಾ ಮಾಡಿಕೊಡುವ ಅವಕಾಶವೆಲ್ಲಿ? ಎಂಬ ಪ್ರಶ್ನೆ ಎದ್ದಿವೆ. ಜಿಲ್ಲಾಧಿಕಾರಿ ಆದೇಶದಂತೆ ಎನ್ ಎ ಆದ ಆಸ್ತಿಗಳಿಗೆ ಅರ್‌ಟಿಸಿಯನ್ನು ಹಕ್ಕು ಪತ್ರವಾಗಿ ಪರಿಗಣಿಸಲು ಬರಲಾರದು ಅದರಿಂದಲೇ ಇಷ್ಟೋಂದು ಬೃಹತ್ ಸಂಖ್ಯೆಯ ಜನರಿಗೆ ತೊಂದರೆಯಾಗಿದೆ ಎಂಬ ಹಿನ್ನಲೆಗೆ ಉತ್ತರ ಕಂಡುಕೊಳ್ಳಬೇಕಿದೆ.