ಪೋಕ್ಸೋ ಪ್ರಕರಣ:ಆರೋಪಿಗೆ ೨೦ ವರ್ಷ ಶಿಕ್ಷೆ

ಯಲ್ಲಾಪುರ:-೨೦೧೯ರಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಮಕ್ಕಳ ಸ್ನೇಹಿ ಹಾಗೂ ೧ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ್ಕುಮಾರ್ ಆರೋಪಿತನಿಗೆ ೨೦ ವರ್ಷಗಳ ಶಿಕ್ಷೆ ಹಾಗೂ ೧ಲಕ್ಷ ರೂ ದಂಡ ವಿಧಿಸಿ ನೀಡಿದ್ದಾರೆ. ಮುಂಬೈ ಮೂಲದ ಅಸ್ಲಂ ಇಸಾಕ್ ತಂಬೊಳಿ ಈತನು ಪಟ್ಟಣದ ನಿವಾಸಿ ೧೭ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂಬ ದೂರು ೨೦೧೯ರಲ್ಲಿ ಯಲ್ಲಾಪುರ ಠಾಣೆಯಲ್ಲಿ ದಾಖಲಾಗಿತ್ತು. ದೂರನ್ನಾಧರಿಸಿ ತನಿಖೆ ಕೈಗೊಂಡ ಅಂದಿನ ಪಿಐ ಮಂಜುನಾಥ ನಾಯ್ಕ ಆರೋಪಿಯನ್ನು ಬಂಧಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಯುತ್ತಿರುವಂತೆಯೇ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ಮತ್ತೊಮ್ಮೆ ಪಿಐ ಸುರೇಶ್ ಯಳ್ಳೂರು ಸಲ್ಲಿಸಿದ್ದರು.ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಅಸ್ಲಂ ಇಸಾಕ್ ತಂಬೊಳಿಗೆ ೨೦ ವರ್ಷ ಜೈಲು ಹಾಗೂ ೧ ಲಕ್ಷ ದಂಡ ವಿಧಿಸಿದೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ೪ ಲಕ್ಷ ರೂ ಹಣವನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಿದೆ.ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಆರೋಪಿತರ ವಿರುದ್ಧ ಶುಭ.ಆರ್.ಗಾಂವ್ಕರ್ ವಿಶೇಷ ಸರ್ಕಾರಿ ಅಭಿಯೋಜಕರ ವಾದ ಮಂಡಿಸಿದ್ದಾರೆ.