ಕಾರ್ಯಕರ್ತರ ಜೊತೆ ಚರ್ಚಿಸಿಮುಂದಿನ ನಡೆ ನಿರ್ಧರಿಸುವೆ:ಶಿವಾನಂದ ಹೆಗಡೆ

ಹೊನ್ನಾವರ: ಕುಮಟಾಹೊನ್ನಾವರ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಶಿವಾನAದ ಹೆಗಡೆ ನಡೆ ಯಾವ ಕಡೆ ಎನ್ನುವ ಕೂತೂಹಲ ಕ್ಷೇತ್ರದೆಲ್ಲಡೆ ಚರ್ಚೆಯಾಗುತ್ತಿದೆ. ಪಕ್ಷ ಟಿಕೇಟ್ ನಿರಾಕರಣೆಯಿಂದ ಅಸಮಧಾನಗೊಂಡು ಪಕ್ಷೇತರವಾಗಿ ಕಣಕ್ಕಿಳಿದ ಮಾಜಿ ಶಾಸಕಿ ಶಾರದಾ ಶೆಟ್ಟಿಗೆ ಆರಂಭದಲ್ಲಿ ಬೆಂಬಲ ಘೋಷಿಸಿದ್ದರು. ನಾಮಪತ್ರ ವಾಪಸ್ಸು ಪಡೆದ ಹಿನ್ನಲೆಯಲ್ಲಿ ಶಿವಾನಂದ ಹೆಗಡೆ ಬೆಂಬಲ ಯಾರಿಗೆ ಎನ್ನುವ ಕೂತೂಹಲ ಚರ್ಚೆಗೆ ಕಾರಣವಾಗಿದೆ.
ಹಳದೀಪುರ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದ ಶಿವಾನಂದ ಹೆಗಡೆ ಕಾಂಗ್ರೇಸ್ ಪ್ರಬಲ ನಾಯಕರಾಗಿದ್ದರು. ಅಲ್ಲದೇ ಹವ್ಯಕ ಸಮಾಜದ ನಾಯಕರಾಗಿರದ್ದರೂ ಕ್ಷೇತ್ರದ ಎಲ್ಲಾ ಸಮಾಜದವರ ಮತ ಪಡೆಯುತ್ತಿದ್ದರು. ಇದೀಗ ಕಾಂಗ್ರೇಸ್ ಮನೆಯಿಂದ ಹೊರ ಬರಲು ಸಜ್ಜಾಗುತ್ತಿದ್ದು, ಇವರು ತನ್ನ ಕಾರ್ಯಕರ್ತರೊಂದಿಗೆ ಯಾವ ಪಕ್ಷದತ್ತ ಹೊಗಲಿದ್ದಾರೆ ಎನ್ನುವುದು ಸದ್ಯದ ಕೂತೂಹಲವಾಗಿದೆ. ವಿಧಾನಸಭಾ
ಚುನಾವಣೆಯ ಸನಿಹದಲ್ಲಿ ಇವರು ಬೇರೆ ಪಕ್ಷದತ್ತ ಮುಖ ಮಾಡಿದರೆ ಕಾಂಗ್ರೇಸ್ ಹೊಡೆತ ಬೀಳುದರಲ್ಲಿ ಎರಡು ಮಾತಿಲ್ಲ.
ಇದನ್ನು ಅರಿತು ಪಕ್ಷದ ನಾಯಕರು ಸಂಧಾನ ಮಾಡುವತ್ತ ಮುಂದಾಗುವ ಸಾಧ್ಯತೆ ಇದೆ. ಒಂದೊಮ್ಮೆ ಸಂಧಾನ ವಿಫಲವಾದರೆ, ಬಿಜೆಪಿ ಜೆಡಿಎಸ್ ಪಕ್ಷದತ್ತ ವಲಸೆ ಹೋದರೆ ಆ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರುವುದರಲ್ಲಿ ಎರಡು ಮಾತಿಲ್ಲ. ಹಳದೀಪುರ, ಚಂದಾವರ, ಕಡತೋಕಾ, ನವಿಲಗೋಣ ಸಾಲ್ಕೋಡ್ ಭಾಗದಲ್ಲಿ ಅಪಾರ ಅಭಿಮಾನಿ ಹೊಂದಿರುವ ಇವರು ತಾವು ಹೋಗುವ ಪಕ್ಷಕ್ಕೆ ಈ ಭಾಗದಿಂದ ಸಾಕಷ್ಟು ಮತಗಳನ್ನು ಸೆಳೆಯುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೆರ ಬಿಜೆಪಿ ಜೆಡಿಎಸ್ ಪಕ್ಷದ ನಾಯಕರು ತಮ್ಮ
ಪಕ್ಷದತ್ತ ಕರೆತರಲು ನೋಡಿದರೆ, ಕಾಂಗ್ರೇಸ್ ಪಕ್ಷ ಪಕ್ಷದಿಂದ ಹೊರ ಹೋಗದಂತೆಯೂ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಮಂಗಳವಾರ ರಾತ್ರಿಯೊಳಗೆ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಇವರ ನಿರ್ಧಾರ ಮೂರು ಪಕ್ಷದ ಮತ ವಿಂಗಡನೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.