ಹೊನ್ನಾವರ: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ೧೨ ಪದವಿ ಪೂವ೯ ಕಾಲೇಜಿನ ವಿವಿಧ ವಿಭಾಗದ ಫಲಿತಾಂಶ ಲಭಿಸಿದೆ.ತಾಲೂಕಿನಲ್ಲಿ ೪ ಸಕಾ೯ರಿ ಪದವಿ ಪೂವ೯ ಕಾಲೇಜು,೫ ಅನುದಾನಿತ ಹಾಗೂ ೩ ಅನುದಾನ ರಹಿತ ಕಾಲೇಜುಗಳಿವೆ. ಸಕಾ೯ರಿ ಪದವಿ ಪೂವ೯ ಕಾಲೇಜು ಹೊನ್ನಾವರ ಕಲಾ ವಿಭಾಗದಲ್ಲಿ ಶೇ.೮೩.೬೨, ವಿಜ್ಞಾನ ವಿಭಾದಲ್ಲಿ ಶೇ.೯೫.೮, ವಾಣಿಜ್ಯ ವಿಭಗದಲ್ಲಿ ಶೇ.೯೫ ಫಲಿತಾಂಶ ಗಳಿಸಿದೆ ಸಕಾ೯ರಿ ಪದವಿ ಪೂವ೯ ಕಾಲೇಜು ಅಳ್ಳಂಕಿ ಕಲಾ ವಿಭಾದಲ್ಲಿ ಶೇ.೯೬.೫೫, ವಿಜ್ಞಾನ ವಿಭಾಗದಲ್ಲಿ ಶೇ.೧೦೦, ವಾಣಿಜ್ಯ ವಿಭಾಗದಲ್ಲಿ ಶೇ.೯೮.೪೩ ಫಲಿತಾಂಶ ಗಳಿಸಿದೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರಿ ಪದವಿ ಪೂವ೯ ಕಾಲೇಜು ಮಂಕಿ ಕಲಾ ವಿಭಾಗದಲ್ಲಿ ಶೇ.೯೩.೫೦ ಫಲಿತಾಂಶ ಗಳಿಸಿದೆ. ಸರ್ಕಾರಿ ಪದವಿ ಪೂವ೯ ಕಾಲೇಜು ಇಡಗುಂಜಿ ಕಲಾ ವಿಭಾಗದಲ್ಲಿ ಶೇ.೮೨, ವಿಜ್ಞಾನ ವಿಭಾಗದಲ್ಲಿ ಶೇ.೫೭, ವಾಣಿಜ್ಯ ವಿಭಾಗದಲ್ಲಿ ಶೇ.೯೧ ಫಲಿತಾಂಶ ಗಳಿಸಿದೆ.ಆರ್ ಇ ಎಸ್ ಜೆಜೆಸಿ ಕಂಪೋಸಿಟ್ ಹಳದಿಪುರ ಕಲಾ ವಿಭಾಗದಲ್ಲಿ ಶೇ. ೫೭ ಫಲಿತಾಂಶ ಗಳಿಸಿದೆ. ಜನತಾ ವಿದ್ಯಾಲಯ ಪಿಯು ಕಾಲೇಜ್ ಕಲಾ ವಿಭಾಗದಲ್ಲಿ ಶೇ.೯೦.೯೧ ಫಲಿತಾಂಶ ಗಳಿಸಿದೆ. ಎಸ್ ಎಸ್ ಸಿ ಪಿಯು ಕಾಲೇಜು ಕವಲಕ್ಕಿ ಕಲಾ ವಿಭಾದಲ್ಲಿ ಶೇ.೩೦.೭೬ ಫಲಿತಾಂಶ ಗಳಿಸಿದೆ.
ಹೊನ್ನಾವರ ಎಂಪಿಇ ಸೊಸೈಟಿ ಎಸ್ ಡಿ ಎಂ ಕಾಲೇಜ್ ಕಲಾ ವಿಭಾಗದಲ್ಲಿ ಶೇ.೯೬ ವಿಜ್ಞಾನ ವಿಭಾಗದಲ್ಲಿ ಶೇ.೯೯.೩೨, ವಾಣಿಜ್ಯ ಶೇ.೮೬.೬೨ ಫಲಿತಾಂಶ ಗಳಿಸಿದೆ. ಅರೇಅಂಗಡಿಯ ಎಸ್ ಕೆ ಪಿ ಪಿಯು ಕಾಲೇಜ್ ಕಲಾ ವಿಭಾಗದಲ್ಲಿ ಶೇ.೬೭, ವಾಣಿಜ್ಯ ವಿಭಾಗದಲ್ಲಿ ಶೇ.೯೦ ಫಲಿತಾಂಶ ಗಳಿಸಿದೆ. ಶ್ರೀ ಶಾರದಾಂಬಾ ಪಿಯು ಕಾಲೇಜ್ ವಾಣಿಜ್ಯ ವಿಭಾಗದಲ್ಲಿ ಶೇ.೬೮ ಫಲಿತಾಂಶ ಗಳಿಸಿದೆ. ಹೋಲಿ ರೋಸರಿ ಕಾನ್ವೆಂಟ್ ಕಂಫೋಸಿಟ್ ಪಿಯು ಕಾಲೇಜ್ ವಿಜ್ಞಾನ ವಿಭಾಗದಲ್ಲಿ ಶೇ. ೧೦೦ ಫಲಿತಾಂಶ ಗಳಿಸಿದೆ