ಬಿಸಿಲ ಬೇಗೆಗೆ ಬಸವಳಿದ ಜನ:ತೇವಾಂಶದಿಂದಾಗಿ ವಾಡಿಕೆಗಿಂತ ಗರಿಷ್ಟ ಉಷ್ಣಾಂಶ


ಕಾರವಾರ: ಕರಾವಳಿ ಭಾಗದಲ್ಲಿ ಉರಿಸಿಕೆ ಮುಂದುವರೆಯು ತಿದ್ದು,ಕಳೆದ ಕೆಲ ದಿನದಿಂದ ನಿರೀಕ್ಷಿತ ಮಳೆ ಇನ್ನೂ ಸುರಿಯದೇ ಇರುವ ಕಾರಣ ಗರಿಷ್ಟ ಉಷ್ಣಾಂಶ ಮತಷ್ಟು ಏ ರಿಕೆ ಕಾಣುತ್ತಿದೆ.
ಜಿಲ್ಲೆಯಲ್ಲಿ ದಿನವಿಡೀ ಬಿಸಿಲು, ಬೆಳಿಗ್ಗೆ ಮೋಡದಿಂದ ಕೂಡಿರುವ ವಾತಾವರಣ ಕಂಡು ಬರುತ್ತಿದೆ.ಸಾಮಾನ್ಯವಾಗಿ ಏಪ್ರಿಲ್ ನಲ್ಲಿ ಬೆಳಿಗ್ಗೆ ವೇಳೆ ಪುವ೯ ದಿಕ್ಕಿನಿಂದ ಮತ್ತು ಸಂಜೆ ವೇಳೆ ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸುತ್ತದೆ. ಬೆಳಿಗ್ಗೆ ಬೀಸುವ ಗಾಯಿಯಲ್ಲಿ ಬಿಸಿಯ ಅಂಶ ಜಾಸ್ತಿ ಇರುತ್ತದೆ. ಆದರೆ ಸದ್ಯ ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಉಂಟಾಗಿರುವ ಕಾರಣ ಉತ್ತರದಿಂದ ಗಾಳಿ ಬೀಸುತ್ತಿದೆ. ಈ ಗಾಳಿ ಉಷ್ಣ ಅಲೆಗಳನ್ನು ತರುತ್ತದೆ.ಕರಾವಳಿ ಭಾಗದಲ್ಲಿ ವಾತಾವರಣದಲ್ಲಿ ತೇವಾಂಶ ಜಾಸ್ತಿಯಾಗಿದ್ದು, ಗರಿಷ್ಠ ಉಷ್ಣಾಂಶ ಮತ್ತು ತೇವಾಂಶ ಒಟ್ಟಿಗೆ ಸೇರಿ ಉರಿ ತಾಪಮಾನ ಕಂಡು ಬರುತ್ತಿದೆ. ಇದು ಬೇಸಿಗೆಯ ಬೀಗೆ ಮತ್ತಷ್ಟು ಹೆಚ್ಚು ಮಾಡುತ್ತಿದೆ.